News Karnataka Kannada
Saturday, April 13 2024
Cricket
ಕರ್ನಾಟಕ

ಕಾಸರಗೋಡು: ಗಾಂಜಾ ಮತ್ತಿನಲ್ಲಿ ರಿವಾಲ್ವರ್ ತೋರಿಸಿ ಯುವಕನಿಂದ ದಾಂಧಲೆ

Photo Credit :

ಕಾಸರಗೋಡು: ಗಾಂಜಾ ಮತ್ತಿನಲ್ಲಿ ರಿವಾಲ್ವರ್ ತೋರಿಸಿ ಯುವಕನಿಂದ ದಾಂಧಲೆ

ಕಾಸರಗೋಡು : ಗಾಂಜಾ ಮತ್ತಿನಲ್ಲಿ ಯುವಕನೋರ್ವ ದಾಂಧಲೆ ನಡೆಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದ್ದು , ಪೊಲೀಸ್ ವಾಹನಕ್ಕೆ ಹಾಗೂ ಆಸ್ಪತ್ರೆಯ ವಸ್ತುಗಳು ಹಾನಿಗೀಡಾಗಿವೆ.ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ .

ಉದುಮದ ಅಬ್ದುಲ್ ನಾಸರ್ ಬಂಧಿತ ಆರೋಪಿಯಾಗಿದ್ದು , ಶುಕ್ರವಾರ ಮುಂಜಾನೆ ಉದುಮದ ತಾಜ್ ಹೋಟೆಲ್ ಗೆ ನುಗ್ಗಿ ಕಾವಲುಗಾರನಿಗೆ ರಿವಾಲ್ವರ್ ತೋರಿಸಿ ಬೆದರಿಸಿ ದಾಂಧಲೆ ನಡೆಸಿದ್ದನು .

ದಾಂಧಲೆ ಬಳಿಕ ಹೋಟೆಲ್‌ನಿಂದ ಪರಾರಿಯಾಗಿದ್ದ ನಾಸರ್‌ನನ್ನು ಬೇಕಲ ಠಾಣಾ ಪೊಲೀಸರು ಸಿ ಸಿ ಟಿ ವಿ ಕ್ಯಾಮರಾ ಪರಿಶೀಲಿಸಿ ಬಳಿಕ ಮನೆಯಿಂದ ಈತನನ್ನು ಬಂಧಿಸಿದ್ದರು . ಬಳಿಕ ಈತನನ್ನು ತಪಾಸಣೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆ ತಂದ ಸಂದರ್ಭದಲ್ಲಿ ದಾಂಧಲೆ ನಡೆಸಿದ್ದಾನೆ .

ಪೊಲೀಸ್ ವಾಹನದ ಮೇಲೆ ಹತ್ತಿದ ಈತ ಬೀಕೊನ್ ಲೈಟ್ ಗಳನ್ನು ಹುಡಿ ಮಾಡಿದ್ದಾನೆ . ಬಳಿಕ ಗಾಜಿನ ತುಂಡುಗಳನ್ನೆತ್ತಿ ಪೊಲೀಸ್ ವಾಹನದ ಮೇಲೆ ಹಲವು ಸಮಯ ತನ್ನ ಪರಾಕ್ರಮ ನಡೆಸಿದ್ದಾನೆ.

ಆಸ್ಪತ್ರೆಯ ಕಿಟಿಕಿ , ಬಾಗಿಲುಗಳು ಹಾಗೂ ಶೌಚಾಲಯ ದಲ್ಲಿದ್ದ ಬಕೆಟ್ ಗಳನ್ನು ಹಾನಿಗೊಳಿಸಿದ್ದಾನೆ . ಹಲವು ಸಮಯದ ರಂಪಾಟದ ಬಳಿಕ ಆತನನ್ನು ವಶಕ್ಕೆ ಪಡೆದು ಬೇಕಲ ಠಾಣೆ ಗೆ ಕರೆದೊಯ್ದರು.

ಈತನ ವಿರುದ್ಧ ಮಾರಕಾಸ್ತ್ರ ಕೈವಶ ಇರಿಸಿದ್ದ , ಕೊಲೆ ಬೆದರಿಕೆ , ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮೊದಲಾದ ಪ್ರಕರಣಗಳನ್ನು ದಾಖಲಿಸಲಾಗಿದೆ. ಈತ ನನ್ನು ಮಾದಕ ವಸ್ತು ಪ್ರಕರಣಗಳಲ್ಲೂ ಈ ಹಿಂದೆಯೂ ಪೊಲೀಸರು ಬಂಧಿಸಿದ್ದರು . 2018 ರ ಜೂನ್ 25 ರಂದು ಬೇಕಲ ಸಮೀಪದ ಕೋಟಿಕುಳಂ ನಲ್ಲಿ ಯುವಕನ ಮೇಲೆ ಗುಂಡು ಹಾರಿಸಿದ ಪ್ರಕರಣದ ಆರೋಪಿ ಆಗಿದ್ದಾನೆ . ಈ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು