News Karnataka Kannada
Monday, April 15 2024
Cricket
ಕರ್ನಾಟಕ

ಕಾಸರಗೋಡಿನ ಪ್ರಮುಖ ಮಾರುಕಟ್ಟೆಗಳು ಒಂದು ವಾರ ಕಾಲ ಬಂದ್

Photo Credit :

ಕಾಸರಗೋಡಿನ ಪ್ರಮುಖ ಮಾರುಕಟ್ಟೆಗಳು ಒಂದು ವಾರ ಕಾಲ ಬಂದ್

ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕದಿಂದ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಮಾರುಕಟ್ಟೆಗಳನ್ನು  ಒಂದು ವಾರಗಳ ಕಾಲ ಸಂಪೂರ್ಣ ಮುಚ್ಚಲಾಗಿದೆ.

ಕಾಲಿ ಕಡವು ಮೀನು-ತರಕಾರಿ ಮಾರುಕಟ್ಟೆ, ಚೆರ್ಕಳ ಪೇಟೆ, ಕಾಞಂಗಾಡ್  ಮೀನು ಮತ್ತು ತರಕಾರಿ ಮಾರುಕಟ್ಟೆ ತ್ರಿಕ್ಕರಿಪುರ ನೀಲೇಶ್ವರ,ಕುಂಬಳೆ  ಕಾಸರಗೋಡು ತರಕಾರಿ ಮತ್ತು ಮೀನು ಮಾರುಕಟ್ಟೆ , ಕುಂಜತ್ತೂರು ಮಾಡದಲ್ಲಿರುವ  ಮೀನು ಮಾರುಕಟ್ಟೆ,  ಉಪ್ಪಳ ಮೀನು ಮಾರುಕಟ್ಟೆ,  ಉಪ್ಪಳ  ಹನಫಿ  ಬಜಾರ್ ತರಕಾರಿ ಅಂಗಡಿ,  ಮಜೀರ್ ಪಳ್ಳ ತರಕಾರಿ ಅಂಗಡಿಗಳನ್ನು  ಜುಲೈ 17ರ ತನಕ ಮುಚ್ಚಲಾಗಿದ್ದು, ಕಾಸರಗೋಡು  ನಗರದಲ್ಲಿ ಮಾರುಕಟ್ಟೆ ಪ್ರವೇಶದ ಎಲ್ಲಾ ರಸ್ತೆಗಳನ್ನು  ಬಂದ್ ಮಾಡಲಾಗಿದೆ.

ಶುಕ್ರವಾರ  ನಗರದ ಐವರು ವ್ಯಾಪಾರಿಗಳು ಸೇರಿದಂತೆ 11 ಮಂದಿಯಲ್ಲಿ ಸೋಂಕು ದ್ರಢಪಟ್ಟಿತ್ತು.  ಸಂಪರ್ಕದಿಂದ ಸೋಂಕು ಹರಡುತ್ತಿರುವುದರಿಂದ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು  ತೆಗೆದುಕೊಂಡಿದ್ದು, ಸಂಜೆ  ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮ್ ದಾಸ್ ನೇತೃತ್ವದಲ್ಲಿ ತುರ್ತು ಸಭೆ ಸೇರಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿತು.

ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಶುಕ್ರವಾರ ಸಂಪರ್ಕದಿಂದ 11 ಮಂದಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ  ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು  ತೆಗೆದುಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು