News Karnataka Kannada
Saturday, April 13 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ 5 ಸಾವಿರ ದಾಟಿದ ಕೋವಿಡ್-19

Photo Credit :

 ಕಾಸರಗೋಡಿನಲ್ಲಿ 5 ಸಾವಿರ ದಾಟಿದ ಕೋವಿಡ್-19

ಕಾಸರಗೋಡು : ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಐದು ಸಾವಿರ ದಾಟಿದೆ. ದೇಶದಲ್ಲೇ ಮೂರನೇ ಪ್ರಕರಣ ಪತ್ತೆಯಾದ ಕಾಸರಗೋಡಿನಲ್ಲಿ ಏಳು ತಿಂಗಳಲ್ಲಿ ಸೋಂಕಿತರ ಸಂಖ್ಯೆ ಐದು ಸಾವಿರವನ್ನು ದಾಟಿದ್ದು , ಇದುವರಗೆ 5,039 ಮಂದಿಗೆ ಸೋಂಕು ತಗುಲಿದೆ.

ಈ ಪೈಕಿ 4090 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. ವಿದೇಶದಿಂದ ಬಂದ 550 ಮಂದಿ ಹಾಗು ಹೊರರಾಜ್ಯಗಳಿಂದ ಬಂದ 399 ಮಂದಿಗೆ ಸೋಂಕು ತಗುಲಿದೆ.

ಇದುವರೆಗೆ 60, 488 ಮಂದಿಯ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ.

ಮೊದಲ ಹಾಗೂ ಎರಡನೇ ಹಂತದಲ್ಲಿ ಜಿಲ್ಲೆಯಲ್ಲಿ ಸೋಂಕು ಹರಡುವಿಕೆಗೆ ಕಡಿವಾಣ ಹಾಕಲಾಗಿತ್ತು . ಮೇ ಆರಂಭದಲ್ಲಿ ಜಿಲ್ಲೆ ಸಂಪೂರ್ಣ ಸೋಂಕು ಮುಕ್ತವಾದರೂ ಬಳಿಕ ದಿನಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚುತ್ತಾ ಸಾಗಿತು . ಜುಲೈ 17 ಕ್ಕೆ ಜಿಲ್ಲೆಯಲ್ಲಿ ಮೊದಲ ಕೊರೋನಾ ಬಲಿ ವರದಿಯಾಗಿದ್ದು , ಆಗಸ್ಟ್ 30 ರ ತನಕ 38 ಮಂದಿಬಲಿಯಾಗಿದ್ದಾರೆ . ಜುಲೈ 22 ರಿಂದ ಸೋಂಕಿತರ ಸಂಖ್ಯೆ 100 ರ ಗಡಿ ದಾಟಿದೆ 19ದಿನ ನೂರು ಹಾಗೂ ಒಂದು ಬಾರಿ 200 ರ ಗಡಿಯನ್ನು ದಾಟಿದೆ. ಮೂರನೇ ಹಂತದಲ್ಲಿ 4866 ಪ್ರಕರಣ ದ್ರಢಪಟ್ಟಿದೆ.

ಫೆಬ್ರವರಿ 3 ರಂದು ಚೀನಾ ದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಮೊದಲ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿತ್ತು . ದೇಶದಲ್ಲಿ ಮೂರನೇ ಪ್ರಕರಣ ಕಾಸರಗೋಡಿನಲ್ಲಿ ಪತ್ತೆಯಾಗಿತ್ತು . ಆದರೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಯು ದಿಟ್ಟ ನಿರ್ಧಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹರಡುವುದನ್ನು ಕಡಿವಾಣ ಹಾಕಲು ಸಾಧ್ಯವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು