News Karnataka Kannada
Thursday, April 18 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ 10 ಸಾವಿರ ದಾಟಿದ ಕೊರೊನಾ: 79 ಮಂದಿ ಸಾವು

Photo Credit :

ಕಾಸರಗೋಡಿನಲ್ಲಿ 10 ಸಾವಿರ ದಾಟಿದ ಕೊರೊನಾ: 79 ಮಂದಿ ಸಾವು

ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 122 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು , ಇದರಿಂದ ಈ ತನಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತ್ತು ಸಾವಿರ ದಾಟಿದೆ. ಒಟ್ಟು 10, 013 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 2277 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

7657 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 79 ಕ್ಕೇರಿದೆ . ಸೆ. 1 ರಿಂದ 28 ರ ತನಕ 4871 ಮಂದಿಗೆ ಸೋಂಕು ತಗಲಿದೆ. ಸೋಂಕಿತರಲ್ಲಿ 701 ಮಂದಿ ವಿದೇಶದಿಂದ ಹಾಗೂ 535 ಮಂದಿ ಹೊರರಾಜ್ಯಗಳಿಂದ ಬಂದವರು.

ಸೋಮವಾರ ಸೋಂಕಿತರಲ್ಲಿ 114 ಮಂದಿಗೆ ಸಂಪರ್ಕದಿಂದ ಸೋಂಕು ದ್ರಢಪಟ್ಟಿದೆ. ಆರು ಮಂದಿ ಹೊರರಾಜ್ಯ , ಇಬ್ಬರು ವಿದೇಶಗಳಿಂದ ಬಂದವರಾಗಿದ್ದಾರೆ. 91 ಮಂದಿ ಗುಣಮುಖರಾಗಿದ್ದಾರೆ.

4678 ಮಂದಿ ನಿಗಾದಲ್ಲಿದ್ದಾರೆ. ಫೆಬ್ರವರಿ ಮೂರರಂದು ಕಾಸರಗೋಡಿನಲ್ಲಿ ಮೊದಲ ಕೊರೋನ ಪಾಸಿಟಿವ್ ಪತ್ತೆಯಾಗಿತ್ತು . ದೇಶದಲ್ಲೇ ಮೂರನೇ ಪ್ರಕರಣವಾಗಿತ್ತು . ಮೇ ಆರಂಭದಲ್ಲಿ ಸಂಪೂರ್ಣ ಸೋಂಕು ಮುಕ್ತವಾಗಿದ್ದ ಕಾಸರಗೋಡು ಜಿಲ್ಲೆ ಬಳಿಕದ ದಿನಗಳಲ್ಲಿ ಸೋಂಕು ಏರಿಕೆ ಕಂಡಿದ್ದು , ಸಂಪರ್ಕದಿಂದ ಸೋಂಕು ಹರಡುತ್ತಿರುವುದು ಕಳವಳ ಉಂಟು ಮಾಡುತ್ತಿದೆ

ಮತ್ತೆ ಲಾಕ್ ಡೌನ್ ?
ಸೋಂಕಿತರ ಸಂಖ್ಯೆ ಇನ್ನೂ ಏರಿಕೆಯಾದಲ್ಲಿ ಮತ್ತೆ ಲಾಕ್ ಡೌನ್ ಜಾರಿಗೆ ತರುವ ಬಗ್ಗೆ ಕೇರಳ ಸರಕಾರ ಚಿಂತನೆ ನಡೆಸಿದೆ.

ಲಾಕ್ ಡೌನ್ ಜಾರಿಗೊಳಿಸದಿದ್ದರೂ ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ಬಗ್ಗೆ ಯೂ ಚಿಂತನೆ ನಡೆಸುತ್ತಿದ್ದು , ಒಂದೆರಡು ದಿನಗಳಲ್ಲಿ ತೀರ್ಮಾನ ಹೊರಬೀಳಲಿದೆ.

ವ್ಯಾಪಾರ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಪಾಲಿಸದಿದ್ದ ಲ್ಲಿ ಮಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಕೋವಿಡ್ ಮಾನದಂಡ ಪಾಲಿಸಬೇಕು. ಮಳಿಗೆಗಳ ವಿಸ್ತೀರ್ಣ ಅನುಗುಣವಾಗಿ ಗ್ರಾಹಕರಿಗೆ ಪ್ರವೇಶ ನೀಡಬೇಕು . ವಿವಾಹ ಸಮಾರಂಭಕ್ಕೆ 50 ಮಂದಿ ಹಾಗೂ ಮರಣ ಕಾರ್ಯಕ್ರಮಗಳಿಗೆ 20 ಕ್ಕಿಂತ ಅಧಿಕ ಸೇರುವಂತಿಲ್ಲ ಎಂದು ರಾಜ್ಯ ಸರಕಾರ ಆದೇಶ ನೀಡಿದೆ.

ಮಾಸ್ಕ್ ಧರಿಸದಿದ್ದಲ್ಲಿ ದಂಡ ಮೊತ್ತವನ್ನು ಹೆಚ್ಚಿಸಲು ತೀರ್ಮಾನಿಸ ಲಾಗಿದೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು