News Karnataka Kannada
Tuesday, April 23 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಭಾರೀ ಮಳೆ: 3.70 ಕೋಟಿ ರೂ ಕೃಷಿ ಹಾನಿ

Photo Credit :

ಕಾಸರಗೋಡಿನಲ್ಲಿ ಭಾರೀ ಮಳೆ: 3.70 ಕೋಟಿ ರೂ ಕೃಷಿ ಹಾನಿ

ಕಾಸರಗೋಡು: ಭಾರೀ  ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ 3. 70 ಕೋಟಿ ರೂ ಕೃಷಿ ಹಾನಿ ಉಂಟಾಗಿದೆ. 286. 25 ಹೆಕ್ಟೇರ್ ಸ್ಥಳಗಳಲ್ಲಿನ ಬೆಳೆಗಳು  ಹಾನಿಯಾಗಿವೆ . 1862 ರಷ್ಟು  ಕೃಷಿಕರಿಗೆ ನಷ್ಟ ಉಂಟಾಗಿದೆ ಎಂದು   ಜಿಲ್ಲಾಡಳಿತದ ಅಂಕಿ ಅಂಶ ತಿಳಿಸಿದೆ .

 ಅಡಕೆ , ತೆಂಗು ,  ಕಾಳುಮೆಣಸು, ಭತ್ತ , ಮರಗೆಣಸು , ನೇಂದ್ರ ಬಾಳೆ ಮೊದಲಾದ ಬೆಳೆಗಳು  ಹಾನಿಗೊಂಡಲ್ಲಿ ಸೇರಿದೆ .

ಸೋಮವಾರ  ಮಂಜೇಶ್ವರ ತಾಲೂಕಿನಲ್ಲಿ 22 ಕುಟುಂಬಗಳ 99 ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ  ಏಳು ಮನೆಗಳು ಪೂರ್ಣವಾಗಿ , 15 ಮನೆಗಳು ಭಾಗಷ: ವಾಗಿ  ಕುಸಿದಿದೆ .  ಬಂಬ್ರಾಣ  ಬಯಲು ಜಲಾವೃತಗೊಂಡ ಹಿನ್ನಲೆಯಲ್ಲಿ ಈ ಪ್ರದೇಶದ ಹಲವು ಕುಟುಂಬಗಳನ್ನು ತೆರವುಗೊಳಿಸಲಾಗಿದೆ.  ಪೈವಳಿಕೆ ಯಲ್ಲಿ ಗುಡ್ಡ ಕುಸಿದ ಹಿನ್ನಲೆಯಲ್ಲಿ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. 

ಹೊಸದುರ್ಗ ತಾಲೂಕಿನ  ತುರುತ್ತಿ,  ಉದುಮ ,  ಕಯ್ಯೂ ರು , ಅಂಬಲತ್ತರ,  ಪನಯಾಲ್  ಮೊದಲಾದೆಡೆ ಅಪಾರ ಹಾನಿ ಯಾಗಿದೆ.10 ಮನೆಗಳು ಭಾಗಷ ವಾಗಿ ಕುಸಿದಿದೆ. ವೆಳ್ಳರಿಕುಂಡು ತಾಲೂಕಿನಲ್ಲಿ  59 ಮನೆಗಳಿಗೆ ಹಾನಿ  ಉಂಟಾಗಿದೆ .

ಕಾಸರಗೋಡು ತಾಲೂಕಿನಲ್ಲಿ 206 ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾ0ತರಿಸಲಾಗಿದ್ದು ,ಎರಡು ಮನೆಗಳು ಪೂರ್ಣವಾಗಿ 86 ಮನೆಗಳು ಭಾಗಶ: ವಾಗಿ  ಹಾನಿಗೊಂಡಿದೆ.

ಸೋಮವಾರ ಮಳೆ ಪ್ರಮಾಣ ತಗ್ಗಿರುವುದರಿಂದ ಜಿಲ್ಲೆಯ ಬಹುತೇಕ ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ. ಇದರಿಂದ  ಕಾಳಜಿ ಕೇಂದ್ರ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದ್ದ ನೂರಾರು ಮಂದಿ ತಮ್ಮ ಮನೆ ಗಳಿಗೆ  ಮರಳಿದ್ದಾರೆ.

ಜೂನ್ ಒಂದರಿಂದ ಇದುವರೆಗೆ  ಜಿಲ್ಲೆಯಲ್ಲಿ  19 ಮನೆಗಳು ಪೂರ್ಣವಾಗಿ  210 ಮನೆಗಳು ಭಾಗಷ: ವಾಗಿ  ಕುಸಿದಿದೆ .ಈ ತನಕ ನಾಲ್ವರು ಮೃತಪಟ್ಟಿದ್ದಾರೆ  .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು