News Karnataka Kannada
Friday, April 12 2024
Cricket
ಕರ್ನಾಟಕ

ಕಾಸರಗೋಡಿನಲ್ಲಿ ಕೊರೋನಾ ಆಸ್ಪತ್ರೆ ಅಂತಿಮ ಹಂತದಲ್ಲಿ

Photo Credit :

ಕಾಸರಗೋಡಿನಲ್ಲಿ ಕೊರೋನಾ ಆಸ್ಪತ್ರೆ ಅಂತಿಮ ಹಂತದಲ್ಲಿ

ಕಾಸರಗೋಡು: ಕೊರೋನ  ನಿಯಂತ್ರಣ ಯೋಜನೆಯೊಂದಿಗೆ  ಕೇರಳ ಸರಕಾರದ ಸಹಯೋಗದೊಂದಿಗೆ  ಟಾಟಾ ಗ್ರೂಫ್  ಕಾಸರಗೋಡಿನ ಲ್ಲಿ  ನಿರ್ಮಿಸುತ್ತಿರುವ  ಕೋವಿಡ್ ಆಸ್ಪತ್ರೆ ಕಾಮಗಾರಿ ಅಂತಿಮ ಹಂತಕ್ಕೆ ತಲಪಿದ್ದು ,  ಜುಲೈ ಅಂತ್ಯಕ್ಕೆ ಆಸ್ಪತ್ರೆ ಕಾರ್ಯಾರಂಭಗೊಳ್ಳಲಿದೆ ಎಂದು ಟಾಟಾ ಗ್ರೂಫ್ ಯೋಜನಾಧಿಕಾರಿ ಆಂಟನಿ  ಪಿ . ಎಲ್ ತಿಳಿಸಿದ್ದಾರೆ.

ಕೊರೋನ ದ ಆರಂಭದ ದಿನಗಳಲ್ಲಿ ಅತೀ ಹೆಚ್ಚು ಸೋಂಕು ವರದಿಯಾದ ಕಾಸರಗೋಡು  ಜಿಲ್ಲೆಯಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಟಾಟಾ ಗ್ರೂಫ್ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯಗಳ ಆಸ್ಫತ್ರೆಯನ್ನು ತೆಕ್ಕಿಲ್ ಎಂಬಲ್ಲಿ ನಿರ್ಮಿಸಲಾಗುತ್ತಿದೆ.

540 ಹಾಸಿಗೆಗಳನ್ನು ಒಳಗೊಂಡ ಈ ಆಸ್ಪತ್ರೆಯನ್ನು ಮೂರು ವಲಯವನ್ನಾಗಿ ವಿಂಗಡಿಸಲಾಗಿದೆ. ವಲಯ ಒಂದು ಮತ್ತು ಮೂರರಲ್ಲಿ ಕೋವಿಡ್ ಕ್ವಾರಂಟೈನ್ , ವಲಯ ಎರಡರಲ್ಲಿ ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ತೆಕ್ಕಿಲ್ ನ ಐದು ಎಕರೆ  ಸ್ಥಳದಲ್ಲಿ ಆಸ್ಪತ್ರೆ  ತಲೆಯೆತ್ತುತ್ತಿದೆ.

ರಾಜ್ಯ ಸರಕಾರ ಸ್ಥಳ, ನೀರು, ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿದೆ. ಏಪ್ರಿಲ್ 28 ರಿಂದ ಕಾಮಗಾರಿ ಆರಂಭಿಸಿದ್ದು,  ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಿದೆ.  50 ರಷ್ಟು ಕಾರ್ಮಿಕರಿದ್ದು, ಆಧುನಿಕ ತಂತ್ರಜ್ಞಾನ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಆಂಟನಿ ಪಿ . ಐಲ್  ತಿಳಿಸಿದ್ದಾರೆ.

ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿದ ಕೂಡಲೇ ಟಾಟಾ ಗ್ರೂಫ್ ಆಸ್ಪತ್ರೆಯನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಲಿದೆ.  ಕೋವಿಡ್ ಬಳಿಕ ಈ ಆಸ್ಪತ್ರೆ ಇತರ ಚಿಕಿತ್ಸಾ ಸೌಲಭ್ಯಕ್ಕೂ ಬಳಸಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು