News Karnataka Kannada
Friday, April 12 2024
Cricket
ಕರ್ನಾಟಕ

ಕಾರವಾರ: ಶಸ್ತ್ರ ಚಿಕಿತ್ಸೆಯ ಮೂಲಕ ಕೋವಿಡ್ ವಾರ್ಡ್ ನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ  

Photo Credit :

ಕಾರವಾರ: ಶಸ್ತ್ರ ಚಿಕಿತ್ಸೆಯ ಮೂಲಕ ಕೋವಿಡ್ ವಾರ್ಡ್ ನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ   

ಕಾರವಾರ:ಕೊರೊನಾ ಸೋಂಕಿತೆಯಾಗಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಕಾರವಾರ ಮೆಡಿಕಲ್ ಕಾಲೇಜಿನ ವೈದ್ಯರು ಶಸ್ತ್ರ ಚಿಕಿತ್ಸೆ ಹೆರಿಗೆ ಮಾಡಿದ್ದು ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ಕಿಮ್ಸ್ ಡೈರೆಕ್ಟರ್ ಡಾ. ಗಜಾನನ ನಾಯಕ ತಿಳಿಸಿದ್ದಾರೆ. 

ದಾಂಡೇಲಿ ಮೂಲದ 28 ವರ್ಷದ ತುಂಬು ಗರ್ಭಿಣಿ ಕೊರೊನಾ ಸೋಂಕಿತೆಯಾಗಿದ್ದಾರೆ. ಶನಿವಾರ ಅವರಿಗೆ ಹೆರಿಗೆ ಆಗಬೇಕಿತ್ತು. ಆದರೆ, ಮಗುವಿನಲ್ಲಿ ಚಲನೆ ಕಂಡು ಬರದ ಕಾರಣ ಶಸ್ತ್ರ ಚಿಕಿತ್ಸೆ ನಡೆಸುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕಾರವಾರಕ್ಕೆ ರವಾನಿಸಲಾಯಿತು. 

ಶನಿವಾರ ದಾಂಡೇಲಿಯಿಂದ ವಾಹನದ ಮೇಲೆ ಪ್ರಯಾಣಿಸಿ ಕಾರವಾರಕ್ಕೆ ಬರುವ ವೇಳೆಗೆ ಮಹಿಳೆಯ ಆರೋಗ್ಯದ ಸ್ಥಿತಿ ಹದಗೆಟ್ಟಿತ್ತು. ಮಹಿಳೆ ಕೊರೊನಾ ಸೋಂಕಿತೆಯೂ ಆಗಿರುವುದರಿಂದ ಹೆರಿಗೆ ಮಾಡಿಸುವುದು ಸಹ ಕಷ್ಟಕರವಾಗಿತ್ತು. ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕರೂ ಆಗಿರುವ ಪ್ರಸೂತಿ ವೈದ್ಯ ಡಾ. ಶಿವಾನಂದ ಕುಡ್ತರಕರ್ ಮತ್ತು ತಂಡ ನಡುರಾತ್ರಿಯೇ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹೆಣ್ಣು ಮಗುವಿನ ಜನನವಾಗಿದೆ. ಶಸ್ತ್ರ ಚಿಕಿತ್ಸೆಯಲ್ಲಿ ಅರವಳಿಕೆ ತಜ್ಞ ಡಾ.ಕಡೂರ್, ವೈದ್ಯಕೀಯ ಸಿಬ್ಬಂದಿ ಗೌರಿ, ತ್ರಿಶಾ, ಪ್ರವೀಣ ಮತ್ತಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು