News Karnataka Kannada
Tuesday, April 16 2024
Cricket
ಕರ್ನಾಟಕ

ಕಾರವಾರ: ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 1.02 ಕೋಟಿ ರೂ. ಪರಿಹಾರ

Photo Credit :

ಕಾರವಾರ: ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 1.02 ಕೋಟಿ ರೂ. ಪರಿಹಾರ

ಕಾರವಾರ: ಅಪಘಾತ ಪ್ರಕರಣಕ್ಕೆ ಸಂಬಧಿಸಿದಂತೆ ಕಾರವಾರದ ಯನೈಟೆಡ್ ಇಂಡಿಯಾ ಇನ್ಸೂರೆನ್ಸಸ್ ಕಂಪೆನಿಯು ಸಂಬಂಧಟ್ಟ ಕುಟುಂಬಸ್ಥರಿಗೆ 1,02,53,104 ರೂ. ಭಾರೀ ಮೊತ್ತವನ್ನು ಕೋರ್ಟ್ ಆದೇಶದಂತೆ ನೀಡಲಾಗಿದೆ ಎಂದು ಇನ್ಸೂರೆನ್ಸ್ ಕಂಪೆನಿಯ ಹಿರಿಯ ವಿಭಾಗಿಯ ಅಧಿಕಾರಿ ಎಲ್. ಎನ್ ಮುರಳೀಧರ ತಿಳಿಸಿದ್ದಾರೆ.

 

ಕಳೆದ 2016ರ ಸೆ.9ರಂದು ಶಿರಸಿಯ ಸುನೀಲ್ ನಾಯ್ಕ ಎನ್ನುವವ ಟ್ಯಾಂಕರ್ ಲಾರಿ ಗುದ್ದಿದ್ದ ಪರಿಣಾಮ ಮೃತಪಟ್ಟಿದ್ದರು. ವಾಹನದ ವಿಮೆ ಆಧರಿಸಿ ಪರಿಹಾರ ನೀಡಲಾಗಿದೆ. ಸುನೀಲ್ ಲಕ್ಷ್ಮೀನಾರಾಯಣ ನಾಯ್ಕ ಅವರು ಮೆಡಿಕಲ್ ಕ್ಷೇತ್ರದಲ್ಲಿ ದುಡಿಯುತ್ತಿದ್ದರು. 2016ರ ಸೆ.14ರಂದು ತಮ್ಮ ದ್ವಿ ಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಶಿರಸಿ ಬಳಿಕ ಸಂಪಖಂಡದಲ್ಲಿ ಟ್ಯಾಂಕ್ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಸುನೀಲ್ ನಾಯ್ಕ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದರು.

 

ಈ ಅಪಘಾತ ಪಡಿಸಿದ ಟ್ಯಾಂಕರ್ ಮೇಲೆ ಪ್ರಕರಣ ದಾಖಲಾಗಿತ್ತು. ಟ್ಯಾಂಕರ್ ವಾಹನದ ವಿಮೆಯನ್ನು ಕಾರವಾರದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿ ಲಿಮಿಟೆಡ್ ನಲ್ಲಿ ಮಾಡಿಸಲಾಗಿತ್ತು. ಶಿರಸಿಯ ಹಿರಿಯ ಸಿವಿಲ್ ಮತ್ತು ಹೆಚ್ಚುವರಿ ಎಂಎಸಿಟಿ ನ್ಯಾಯಾಲಯ ತೀರ್ಪಿನಂತೆ ವಿಮೆಯ ಸಂಪೂರ್ಣ ಮೊತ್ತ ಕುಟುಂಬಸ್ಥರಿಗೆ ನೀಡಲಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು