News Karnataka Kannada
Saturday, April 13 2024
Cricket
ಕರ್ನಾಟಕ

ಕಳವು ಪ್ರಕರಣ: ಕಾಸರಗೋಡಿನಲ್ಲಿ ಇಬ್ಬರ ಬಂಧನ

Photo Credit :

ಕಳವು ಪ್ರಕರಣ: ಕಾಸರಗೋಡಿನಲ್ಲಿ ಇಬ್ಬರ ಬಂಧನ

ಕಾಸರಗೋಡು : ನಗರದ ಎರಡು ಅಂಗಡಿಗಳಲ್ಲಿ ಕಳವು ನಡೆಸಿದ ಇಬ್ಬರನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂವಟ್ಟು ಪುಯದ ಶಾಹುಲ್ ಹಮೀದ್ (೨೩) ಹಾಗೂ ಕೋಜಿಕ್ಕೋಡ್ ನ ಶಿಜು ( ೪೨) ಎಂದು ಗುರುತಿಸಲಾಗಿದೆ.

ಮೊಬೈಲ್ ಮಳಿಗೆ ಯಿಂದ ಭಾರೀ ಮೌಲ್ಯದ ರೂ . ಮೌಲ್ಯದ ವಸ್ತುಗಳ ಕಳವು ಹಾಗೂ ಸ್ಟೇಷನರಿ ಅಂಗಡಿಯಿಂದ ಕಳವು ಯತ್ನಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ.

ತೆರುವತ್ ನ ಅನ್ವರ್ ಎಂಬವರ ಮೊಬೈಲ್ ಮಳಿಗೆಯಿಂದ ೭೦ ಸಾವಿರ ರೂ . ಮೌಲ್ಯದ ಮೊಬೈಲ್ ಹಾಗೂ ವಸ್ತುಗಳನ್ನು ಕಳವು ಮಾಡಲಾಗಿದ್ದು , ಅನ್ವರ್ ಕ್ವಾರಂಟೈನ್ ನಲ್ಲಿದ್ದ್ದು , ಇಂದು ಬೆಳಿಗ್ಗೆ ಸಹೋದರ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ . ಮಲ್ಲಿಕಾರ್ಜುನ ದೇವಸ್ಥಾನ ರಸ್ತೆಯ ಗಣೇಶ್ ರವರ ಮಾಲಕತ್ವದ ಸ್ಟೇಷನರಿ ಅಂಗಡಿಯಿಂದಲೂ ಕಳವಿಗೆತ್ನಿಸಲಾಗಿದೆ.. ಈ ಎರಡು ಅ೦ಗಡಿಗಳಲ್ಲಿ ಇವರೇ ಕಳ ವು ನಡೆಸಿರುವುದು ತನಿಖೆಯಿಂದ ತಿಳಿದು ಬ೦ದಿದೆೆ.
ನಿನ್ನೆ ರಾತ್ರಿ ಸಂಶಯಾಸ್ಪದವಾಗಿ ಬೈಕ್ ನಲ್ಲಿ ತೆರಳುತ್ತಿರುವುದನ್ನು ಗಮನಿಸಿದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಆರು ಮೊಬೈಲ್ ಫೋನ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು