News Karnataka Kannada
Tuesday, April 23 2024
Cricket
ಕರ್ನಾಟಕ

 ಕರಾವಳಿಯಲ್ಲಿ ಭಾರೀ ಮಳೆ: ಕದ್ರಾ ಆಣೆಕಟ್ಟಿನಿಂದ 47 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Photo Credit :

 ಕರಾವಳಿಯಲ್ಲಿ ಭಾರೀ ಮಳೆ: ಕದ್ರಾ ಆಣೆಕಟ್ಟಿನಿಂದ 47 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೇ ಭಾರೀ ಮಳೆ ಆರಂಭಗೊಂಡಿದೆ. ಮಳೆಯ ತೀವ್ರತೆಗೆ ಅನೇಕ ಪ್ರದೇಶಗಳು ಜಲಾವೃಗೊಂಡಿದ್ದು, ರಭಸದ ಗಾಳಿ ಇದ್ದರಿಂದ ಸಮುದ್ರದ ಅಬ್ಬರವೂ ಜೋರಾಗಿತ್ತು.

ಸತತ ಗಾಳಿ ಹಾಗೂ ಮಳೆಯಿಂದಾಗಿ ಜಿಲ್ಲೆಯ ವಿವಿಧಡೆ ಹಾನಿಗಳಾಗಿವೆ. ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬೀಳುವುದು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳುವುದು ಸಾಮಾನ್ಯವಾಗಿದೆ. ಕಾರವಾರ ನಗರದಲ್ಲಿ ಶನಿವಾರ ರಾತ್ರಿಯಿಂದ ಶುರುವಾದ ಮಳೆ ಮರುದಿನ ಸಂಜೆಯವರೆಗೂ ಬಿಡುವು ನೀಡಿಲ್ಲ. ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿಯೂ ರಭಸ ಮಳೆ ಮುಂದುವರೆದಿದೆ. ಕುಮಟಾ ಹಾಗೂ ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲಾವೃತಗೊಂಡಿದೆ.

ಕೆಲ ಸಮಯದ ನಂತರ ಹೆದ್ದಾರಿಯಿಂದ ನೀರು ಇಳಿದು ಹೋಗಿದೆ. ಮಲೆನಾಡು ಭಾಗಗಳಲ್ಲಿ ಕೂಡ ಸಾಮಾನ್ಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಯಲ್ಲಾಪುರ, ಸಿದ್ದಾಪುರ ಭಾಗದಲ್ಲಿ ಮಳೆಯಾಗಿದೆ. ಹಳಿಯಾಳ, ಮುಂಡಗೋಡು ತಾಲೂಕಿನಲ್ಲಿ ಆಗಾಗ ಮಳೆ ಸುರಿಯುತ್ತಿದೆ. ದಾಂಡೇಲಿಯಲ್ಲಿ ಸಹ ಜೋರು ಮಳೆ ಸುರಿದಿದೆ.

ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿವೆ. ಕಾಳಿ ಹಿನ್ನಿರಿನಲ್ಲೀ ಭಾರೀ ಮಳೆಯಾಗಿದ್ದರಿಂದ ಅಣೆಕಟ್ಟುಗಳಲ್ಲಿ ಕೂಡ ಭಾರೀ ಪ್ರಮಾಣದ ನೀರು ಸಂಗ್ರಹವಾಗಿದ್ದು ಅಣೆಕಟ್ಟುಗಳ ಭದ್ರತೆ ದೃಷ್ಟಿಯಿಂದ ಮುನ್ನಚ್ಚರಿಕಾ ಕ್ರಮವಾಗಿ ನೀರು ಹೊರ ಹಾಕಲಾಗಿದೆ. ಕದ್ರಾ ಅಣೆಕಟ್ಟಿನಿಂದ 47200 ಕ್ಯೂಸೆಕ್ಸ್ ನೀರನ್ನು ಬಿಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು