News Karnataka Kannada
Saturday, April 13 2024
Cricket
ಕರ್ನಾಟಕ

ಕಬಿನಿಯಿಂದ ಹರಿದ ನೀರಿಗೆ ಮುಳುಗಿದ ಸುತ್ತೂರು ಸೇತುವೆ

Photo Credit :

ಕಬಿನಿಯಿಂದ ಹರಿದ ನೀರಿಗೆ ಮುಳುಗಿದ ಸುತ್ತೂರು ಸೇತುವೆ

ಮೈಸೂರು: ಕೇರಳದ ವೈನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಕಬಿನಿ, ತಾರಕ ಮತ್ತು ನುಗು ಜಲಾಶಯ ಭರ್ತಿಯಾಗಿ ಹೆಚ್ಚುವರಿ ಸುಮಾರು 65 ಸಾವಿರ ಕ್ಯುಸೆಕ್ ನೀರನ್ನು ಬಿಟ್ಟ ಪರಿಣಾಮ ಮೈಸೂರು ಜಿಲ್ಲೆಯ ನಂಜನಗೂಡಿನ ಸುತ್ತೂರು ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ.

ಕಳೆದ ಕೆಲ ವರ್ಷಗಳಿಂದ ಕಬಿನಿಜಲಾಶಯದಿಂದ ನೀರು ಹರಿಸಿದಾಗ ಈ ಸೇತುವೆ ಮುಳುಗಡೆಯಾಗುವುದು ಸಾಮಾನ್ಯವಾಗಿದೆ. ಒಂದೆರಡು ವರ್ಷಗಳ ಹಿಂದೆ ಮಳೆಯ ಪ್ರಮಾಣ ಹೆಚ್ಚಾಗದ ಕಾರಣ ಈ ಸೇತುವೆ ಮುಳುಗಡೆಯಾಗುವಷ್ಟರ ಮಟ್ಟಿಗೆ ನೀರು ಕಪಿಲ ನದಿಯಲ್ಲಿ ಹರಿದಿರಲಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಈ ಸೇತುವೆ ಮುಳುಗಡೆಯಾಗುತ್ತಿದೆ. ಗುರುವಾರ ಕಬಿನಿ, ತಾರಕ, ನುಗು ಜಲಾಶಯದಿಂದ ನೀರು ಹರಿಸಿದ ಪರಿಣಾಮ ಸುಮಾರು 65ಸಾವಿರ ಕ್ಯುಸೆಕ್ ನೀರು ಹರಿದು ಬಂದಿದ್ದು ಇದರಿಂದ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಐತಿಹಾಸಿಕ ಸುತ್ತೂರು ಕ್ಷೇತ್ರವು ಮೈಸೂರಿನೊಂದಿಗೆ ಸಂಪರ್ಕ ಕಡಿದುಕೊಂಡಿದೆ.

 

ನೀರು ಎಲ್ಲೆಂದರಲ್ಲಿ ಹರಡಿ ಹರಿಯುತ್ತಿದ್ದು, ನದಿ ಪಾತ್ರದ ಅಕ್ಕಪಕ್ಕಗಳ ಜಮೀನುಗಳಿಗೆ ನೀರು ನುಗಿದೆ. ಸುತ್ತೂರು ವ್ಯಾಪ್ತಿಯಲ್ಲಿ ಜನ ಹೆಚ್ಚಾಗಿ ಭತ್ತದ ಕೃಷಿಯನ್ನೇ ನಂಬಿದ್ದು ವಿಶಾಲ ಭತ್ತದ ಬಯಲುಗಳಿವೆ. ಈಗಾಗಲೇ ಪೈರು ಹಾಕಲಾಗಿದೆ. ಆದರೆ ಅದು ಈಗ ನೀರು ಪಾಲಾಗಿದ್ದು, ಇದರಿಂದ ರೈತರು ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

 

ಮೊದಲೆಲ್ಲ ವಯನಾಡಿನಲ್ಲಿ ಮಳೆ ಬಂದರೆ ನೀರು ಮಾತ್ರ ಹರಿದು ಬರುತ್ತಿತ್ತು. ಆದರೆ ಈ ಬಾರಿ ಮಳೆಯೂ ಈ ವ್ಯಾಪ್ತಿಯಲ್ಲಿ ಸುರಿಯುತ್ತಿದೆ. ಕೇರಳದ ವೈನಾಡಿನಲ್ಲಿ ಮಳೆ ಪ್ರಮಾಣ ಜಾಸ್ತಿಯಾದರೆ ಇನ್ನಷ್ಟು ನೀರು ಹರಿದು ಬರಲಿದ್ದು ಪ್ರವಾಹ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು