News Karnataka Kannada
Monday, April 22 2024
Cricket
ಕರ್ನಾಟಕ

ಎಸ್‍ಡಿಪಿಐ-ಪಿಎಫ್‍ಐ ನಿಷೇಧಿಸಿ ತೋರಿಸಿ: ರಾಮಲಿಂಗಾರೆಡ್ಡಿ

Photo Credit :

ಎಸ್‍ಡಿಪಿಐ-ಪಿಎಫ್‍ಐ ನಿಷೇಧಿಸಿ ತೋರಿಸಿ: ರಾಮಲಿಂಗಾರೆಡ್ಡಿ

ರಾಮನಗರ: ಬಿಜೆಪಿಯವರಿಗೆ ಧೈರ್ಯವಿದ್ದರೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸಿ ತೋರಿಸಲಿ ಎಂದು ಶಾಸಕರೂ ಆದ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಸವಾಲ್ ಎಸೆದಿದ್ದಾರೆ.

ತಾಲೂಕಿನ ಬಿಡದಿ ಪುರಸಭೆ 3ನೇ ವ್ಯಾಪ್ತಿಯ ತಮ್ಮಣ್ಣನದೊಡ್ಡಿ ಗ್ರಾಮದ ಎಲ್ಲಮ್ಮತಾಯಿ ದೇವಾಲಯದಲ್ಲಿ ನೂತನ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಗಲಭೆ ಉಂಟಾದಾಗ ಮಾತ್ರ ಬಿಜೆಪಿಯವರು ಎಸ್.ಡಿ.ಪಿ.ಐ ನಿಷೇಧಿಸುವ ಬಗ್ಗೆ ಮಾತನಾಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಮತಗಳ ವಿಭಜನೆ ಮಾಡುವ ಹುನ್ನಾರದ ರಾಜಕಾರಣವಾಗಿದೆ. ಬಿಜೆಪಿಯವರೇ ಎಸ್‍ಡಿಪಿಐ ಸಂಘಟನೆಯ ಮಹಾಪೋಷಕರಾಗಿದ್ದಾರೆ. ಕಳೆದ 6 ವರ್ಷಗಳಿಂದಲೂ ಕೇಂದ್ರದಲ್ಲಿ ಬಿಜೆಪಿ ಆಡಳಿತವಿದ್ದು, ರಾಜ್ಯದಲ್ಲೂ ಸಹ ಈಗ ಅವರದೇ ಸರಕಾರವಿದೆ. ಆದರೆ ದಿಟ್ಟ ನಿರ್ಧಾರ ಕೈಗೊಳ್ಳಲು ಮೀನಾ-ಮೇಷವೇಕೆ? ರಾಜಕಾರಣದ ಉದ್ದೇಶವಿರಿಸಿಕೊಂಡು ಸಂಘಟನೆಗಳಿಗೆ ಕಡಿವಾಣ ಹಾಕುವ ಬೆದರಿಕೆವೊಡ್ಡುತ್ತಿದ್ದಾರೆ. ಹೀಗಾಗಿ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ನಿಷೇಧಿಸುವ ಮಾತು ಕೇವಲ ಹೇಳಿಕೆಗೆ ಸೀಮಿತವಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದ ಬಿಜೆಪಿ ಸರಕಾರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ದಲಿತ ಸಮುದಾಯದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರಕ್ಷಣೆ ನೀಡುವಂತೆ ಕಳೆದ ಐದು ದಿನಗಳಿಂದಲೂ ಸರಕಾರಕ್ಕೆ ಮನವಿ ಮಾಡುತ್ತಿದ್ದರೂ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ದೇಶದಲ್ಲಿ ಕರ್ನಾಟಕ ಪೊಲೀಸ್ ಗೆ ಉತ್ತಮ ಹೆಸರಿದೆ. ಆದರೆ ಸೂಕ್ಷ್ಮ ಸ್ಥಳವಾಗಿರುವ ಪ್ರದೇಶದಲ್ಲಿ ಪೊಲೀಸ್ ಠಾಣೆ ಇದ್ದರೂ ಸಹ ಶಾಸಕರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದನ್ನು ಪೊಲೀಸರಿಂದ ತಡೆಯಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ಪ್ರಕರಣವನ್ನು ಕೇವಲ ಒಂದು ಗುಂಪಿನ ಮೇಲೆ ಹೇರಲಾಗುತ್ತಿದೆ. ಪ್ರಕರಣಕ್ಕೆ ಕಾರಣನಾದ ನವೀನ್ ಕೂಡ ಬಿಜೆಪಿಯ ಒಬ್ಬ ಸಕ್ರಿಯ ಸದಸ್ಯನಾಗಿದ್ದಾನೆ. ಈ ವಿಷಯವನ್ನು ಕಾಂಗ್ರೆಸ್ ಪP್ಷÀ ದಾಖಲೆ ಸಮೇತ ಬಿಡುಗಡೆ ಮಾಡಿದ ನಂತರ ಬಿಜೆಪಿಯವರು ಪ್ರಕರಣದ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಘಟನೆಗೆ ಕಾರಣರಲ್ಲದ ಕಾಂಗ್ರೆಸ್ ಪಕ್ಷದ ಬಿಬಿಎಂಪಿ ಸದಸ್ಯರನ್ನು ಗುರಿಯಾಗಿಸಿಕೊಂಡು ನೋಟಿಸ್ ನೀಡಿರುವುದು ಬಿಜೆಪಿಯ ಷಡ್ಯಂತ್ರ ಎಂದು ಆರೋಪಿಸಿದರು.

ಈ ವೇಳೆ ವಿಗ್ರಹ ದಾನಿ ಬೆಂಗಳೂರಿನ ಎಲ್ಲಪ್ಪ, ಬಿಡದಿ ಪುರಸಭೆ ಸದಸ್ಯ ಟಿ.ಕುಮಾರ್, ಗ್ರಾಮಸ್ಥರಾದ ಕಾಂತರಾಜು, ಮಹೇಶ, ರಾಜೇಶ್, ಕುಮಾರ್, ರಾಜು ಸೇರಿದಂತೆ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು