News Karnataka Kannada
Sunday, April 14 2024
Cricket
ಕರ್ನಾಟಕ

ಉ.ಕ.ಜಿಲ್ಲೆಯಲ್ಲಿ 101 ಹೊಸ ಪ್ರಕರಣ ಪತ್ತೆ: ಮೂವರ ಸಾವು

Photo Credit :

ಉ.ಕ.ಜಿಲ್ಲೆಯಲ್ಲಿ 101 ಹೊಸ ಪ್ರಕರಣ ಪತ್ತೆ: ಮೂವರ ಸಾವು

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ 101 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 4618 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಪತ್ತೆಯಾದ ಪ್ರಕರಣಗಳ ಪೈಕಿ ಭಟ್ಕಳದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಕಾರವಾರ 10, ಅಂಕೋಲಾ 2, ಕುಮಟಾ 5, ಹೊನ್ನಾವರ11, ಭಟ್ಕಳ 33, ಶಿರಸಿ 19, ಮುಂಡಗೋಡ 6, ಹಳಿಯಾಳ 10 ಹಾಗೂ ಜೊಯಿಡಾದಲ್ಲಿ 5 ಪ್ರಕರಣಗಳು  ಪತ್ತೆಯಾಗಿದೆ.

ಮೂವರ ಸಾವು

ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಶುಕ್ರವಾರ ಮೂವರು ಮೃತಪಟ್ಟಿದ್ದಾರೆ. ಇವರಲ್ಲಿ ಹೊನ್ನಾವರ 2 ಹಾಗೂ ಹಳಿಯಾಳದಲ್ಲಿ ಒರ್ವರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ ಈವರೆಗೆ 7, ಅಂಕೋಲಾ 4, ಹೊನ್ನಾವರ 6, ಭಟ್ಕಳ11, ಶಿರಸಿ 6, ಯಲ್ಲಾಪುರ 1, ಮುಂಡಗೋಡ 3, ಹಳಿಯಾಳದಲ್ಲಿ 13 ಜನರು ಮೃತಪಟ್ಟಿದ್ದಾರೆ.

 

 88 ಜನ ಗುಣಮುಖ

ಜಿಲ್ಲೆಯ ವಿವಿಧ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ ಇಂದು 88 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 3434 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 5, ಅಂಕೋಲಾ 5, ಕುಮಟಾ 8, ಹೊನ್ನಾವರ 1, ಭಟ್ಕಳ 22, ಶಿರಸಿ 9, ಸಿದ್ದಾಪುರ 1, ಯಲ್ಲಾಪುರ 4, ಮುಂಡಗೋಡ 11, ಹಳಿಯಾಳ 21 ಹಾಗೂ ಜೊಯಿಡಾದಲ್ಲಿ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು