News Karnataka Kannada
Saturday, April 20 2024
Cricket
ಕರ್ನಾಟಕ

ಉ.ಕ. ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಕಾಟ: ಒಂದೇ ದಿನಕ್ಕೆ 36 ಪ್ರಕರಣ ದೃಢ

Photo Credit :

ಉ.ಕ. ಜಿಲ್ಲೆಯಲ್ಲಿ ನಿಲ್ಲದ ಕೊರೊನಾ ಕಾಟ: ಒಂದೇ ದಿನಕ್ಕೆ 36 ಪ್ರಕರಣ ದೃಢ

 

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರ ಒಂದೇ ದಿನಕ್ಕೆ 36 ಕೊರೊನಾ ಸೋಂಕಿತರು ಪತ್ತೆಗಿದ್ದಾರೆ.

ಕುಮಟಾ ತಾಲೂಕಿನಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಜಿಲ್ಲೆಯ ಭಟ್ಕಳದಲ್ಲಿ 7, ಶಿರಸಿಯಲ್ಲಿ 1, ಕುಮಟಾದಲ್ಲಿ 14, ಹೊನ್ನಾವರದಲ್ಲಿ 4, ಹಳಿಯಾಳದಲ್ಲಿ 6, ಯಲ್ಲಾಪುರದಲ್ಲಿ 2, ಕಾರವಾರದಲ್ಲಿ 2 ಪ್ರಕರಣ ದಾಖಲಾಗಿದೆ. ಪೈಕಿ ಕುಮಟಾದಲ್ಲಿ ಎಂಟು ಹೆಣ್ಣು, ಆರು ಜನ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಭಟ್ಕಳ ಆರು ಗಂಡು, ಒಂದು ಹೆಣ್ಣು, ಹಳಿಯಾಳ ಮೂರು ಗಂಡು, ಮೂರು ಹೆಣ್ಣು, ಹೊನ್ನಾವರ ಮೂರು ಗಂಡು, ಒಂದು ಹೆಣ್ಣು, ಕಾರವಾರ ಎರಡು ಗಂಡು, ಯಲ್ಲಾಪುರ ಒಂದು ಗಂಡು, ಒಂದು ಹೆಣ್ಣು, ಶಿರಸಿ ಗಂಡಿನಲ್ಲಿ ಸೋಂಕು ಖಚಿತವಾಗಿದೆ.

ಭಟ್ಕಳದ ಸೋಂಕಿತರ ಪೈಕಿ ವಿದೇಶದಿಂದ ಬಂದ 61 ರ ವ್ಯಕ್ತಿ, 85 ರ ವೃದ್ಧ, 39ರ ವ್ಯಕ್ತಿ , 48ರ ಮಹಿಳೆ ಪ್ರಾಥಮಿಕ ಸಂಪರ್ಕ, 19, 39 ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. 9ರ ಬಾಲಕ ಕೊರೊನಾ ಸೋಂಕಿತ ಗುಣಲಕ್ಷಣವಿತ್ತು. ಶಿರಸಿ 25 ಯುವಕ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. ಕಾರವಾರ 23, 31ರ ಯುವಕರಲ್ಲಿ ಸೋಂಕು ಪತ್ತೆಯಾಗಿದೆ. ಯಲ್ಲಾಪುರದ 25ರ ಗಂಡ, 29 ಹೆಣ್ಣಿನಲ್ಲಿ ಸೋಂಕು ಪತ್ತೆಯಾಗಿದೆ. ಟ್ರಾವೇಲ್ ಹಿಸ್ರ್ಟಿ ಪತ್ತೆ ಮಾಡಲಾಗುತ್ತಿದೆ.

ಹೊನ್ನಾವರ ತಾಲೂಕಿನ 20, 19ರ, ಯುವಕ, 44ರ ವ್ಯಕ್ತಿ ವಿದೇಶದಿಂದ ಬಂದಿದ್ದು 55 ರ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು ಪ್ರಾಥಮಿಕ ಸಂಪರ್ಕ ಹೊಂದಿದ್ದಳು. ಹಳಿಯಾಳದ 42ರ ವ್ಯಕ್ತಿ, 33 ಮಹಿಳೆ, 29 ರ ಮಹಿಳೆ 13ರ ಬಾಲಕ ಪ್ರಾಥಮಿಕ ಸಂಪರ್ಕ. ಹಾಗೂ 25ರ ವ್ಯಕ್ತಿ ಹಾಗೂ 60 ವ್ಯಕ್ತಿಯಲ್ಲಿ ಸೋಂಕಿದ್ದು ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. ಅತೀ ಹೆಚ್ಚು ಕೊರೊನಾ ಸೋಂಕು ಪತ್ತೆಯಾಗಿರುವ ಕುಮಟಾ ತಾಲೂಕಿನಲ್ಲಿ 3, 6, 7, 3, 8, 4, 3 ರ ಬಾಲಕಿ, 53, 36, 33, 44ರ ವ್ಯಕ್ತಿ, 23, 28ರ ಮಹಿಳೆಯಲ್ಲಿ ಸೋಂಕು ತಗಲುತ್ತಿದ್ದು ಇವರು ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದರು. 49ರ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು