News Karnataka Kannada
Tuesday, April 16 2024
Cricket
ಕರ್ನಾಟಕ

ಉ.ಕನ್ನಡ ಜಿಲ್ಲೆಯಲ್ಲಿ 3 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ

Photo Credit :

ಉ.ಕನ್ನಡ ಜಿಲ್ಲೆಯಲ್ಲಿ 3 ಸಾವಿರ ಗಡಿ ದಾಟಿದ ಕೊರೋನಾ ಪ್ರಕರಣ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ 99 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3009  ಪ್ರಕರಣ ದಾಖಲಾಗಿದೆ.

ಪತ್ತೆಯಾದ ಸೋಂಕಿತರ ಪೈಕಿ ಕಾರವಾರ 14, ಕುಮಟಾ 4, ಹೊನ್ನಾವರ 20, ಭಟ್ಕಳ 15, ಶಿರಸಿ 5, ಸಿದ್ದಾಪುರ 1, ಮುಂಡಗೋಡ 6, ಹಳಿಯಾಳ 27, ಜೊಯಿಡಾದಲ್ಲಿ 7 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಹಳಿಯಾಳದಲ್ಲಿ ಇಂದು ಅತೀ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಇಂದು ಕೊರೋನಾ ಸೋಂಕಿತ ಪ್ರಕರಣಗಳು 3 ಸಾವಿರ ಗಡಿ ದಾಟಿದೆ.

ಅದರಂತೆ ಜಿಲ್ಲೆಯಲ್ಲಿ ಬುಧವಾರ 74 ಕೊರೋನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ವಿವಿಧ ತಾಲೂಕಿನ ಕೊವಿಡ್ ವಾರ್ಡ್  ನಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತರ ಪೈಕಿ ಕಾರವಾರ 20, ಯಲ್ಲಾಪುರ, ಮುಂಡಗೋಡ 23, ಹಳಿಯಾಳದಲ್ಲಿ 26 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 2070 ಜನರು ಗುಣಮುಖರಾಗಿದ್ದು 913 ಜನರು ಚಿಕಿತ್ಸೆಪಡೆಯುತ್ತಿದ್ದು ಇದರಲ್ಲಿ 131 ಜನರು ಹೋಮ್ ಐಸೋಲೇಶನ್ ಇದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು