News Karnataka Kannada
Tuesday, April 23 2024
Cricket
ಕರ್ನಾಟಕ

ಉ.ಕನ್ನಡ ಜಿಲ್ಲೆಯಲ್ಲಿ ಶನಿವಾರ 40 ಜನರಿಗೆ ಕೊರೊನಾ ದೃಢ

Photo Credit :

ಉ.ಕನ್ನಡ ಜಿಲ್ಲೆಯಲ್ಲಿ ಶನಿವಾರ 40 ಜನರಿಗೆ ಕೊರೊನಾ ದೃಢ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಹೆಚ್ಚುತ್ತಲೇ ಇದ್ದು ಶನಿವಾರ ಒಂದೇ ದಿನಕ್ಕೆ 40 ಪ್ರಕರಣಗಳು ದಾಖಲಾಗಿದ್ದು ಶಿರಸಿಯ ಜನರು ಬೆಚ್ಚಿ ಬೀಳುವಂತ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಕೊರೊನಾ ಸೋಂಕಿತರ ಸಂಖ್ಯೆ 600 ಗಡಿ ತಲುಪುವ ಹಂತಕ್ಕೆ ತಲುಪಿದ್ದು ಜನರಲ್ಲಿ ಆತಂಕದ ಸೃಷ್ಟಿಯಾಗಿದೆ. ಶನಿವಾರ ಪತ್ತೆಯಾದ ಸೋಂಕಿತರ ಪೈಕಿ ಶಿರಸಿ 25, ಹಳಿಯಾಳ 6, ಮುಂಡಗೋಡ 2,ಕುಮಟಾ 2,ಕಾರವಾರ 2, ಹೊನ್ನಾವರ 2, ಭಟ್ಕಳ 1 ಒಂದು ಪ್ರಕರಣ ಪತ್ತೆಯಾಗಿದೆ.

ಇದರಲ್ಲಿ 28 ಗಂಡು ಹಾಗೂ 12 ಜನ ಹೆಣ್ಣಿನಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ಶಿರಸಿ ತಾಲೂಕಿನ ಸೋಂಕಿತರ ಪೈಕಿ ಸೋಂಕಿತ 23156 ನಿಂದ 14 ಜನರಿಗೆ ಪ್ರಾಥಮಿಕ ಹಾಗೂ ಆತನಿಂದಲೇ  7ಜನರಿಗೆ ದ್ವಿತೀಯ ಹಂತದ ಸೋಂಕು ತಗುಲಿದೆ. ಇವರಲ್ಲಿ ಪ್ರಾಥಮಿಕ ಹಂತದ ಸೋಂಕಿತರಾಗಿ 55, 51, 32, 35 ರ  ಮಹಿಳೆ, 7ರ ಬಾಲಕಿ, 25, 25 ಯುವಕ, 38, 42, 47, 56, 42, 54 ರ ವ್ಯಕ್ತಿ, 53ರ ವ್ಯಕ್ತಿಗೆ ಸೋಂಕು ಬಂದಿದೆ. ಅದರಂತೆ  ದ್ವಿತೀಯ ಹಂತದಿಂದ  31, 43, 30, 53, 55ರ ಪುರುಷ, 19 ಯುವತಿ, 24ರ ಯವಕನಿಗೂ  ಸೋಂಕು ತಗುಲಿದೆ. ಅದರಂತೆ 18269 ಸೋಂಕಿತನಿಂದ 34 ರ ಮಹಿಳೆ, 18270 ಸೋಂಕಿತನಿಂದ 11 ರ ಬಾಲಕ, ಮುಂಬಯಿನಿಂದ ವಾಪಸ್ ಬಂದ 28 ಯವಕ, 24 ಯವತಿಗೆ ಸೋಂಕಿ ತಗುಲಿದೆ.

ಹಳಿಯಾಳ ತಾಲೂಕಿನಲ್ಲಿ ಆರು ಜನರಿಗೆ ಸೋಂಕು ದೃಢಪಟ್ಟಿದ್ದು ಮೂರು ಜನರ ಟ್ರಾವೇಲ್ ಹಿಸ್ಟ್ರಿ ಪತ್ತೆಯಾಗಿಲ್ಲ. 56ರ ಮಹಿಳೆ, 12 ಬಾಲಕ,  27ರ ಯುವತಿಯಲ್ಲಿ ಸೋಂಕು ಪತ್ತೆಯಾಗಿದ್ದು ಇರುವ ಟ್ರಾವೇಲ್ ಹಿಸ್ಟ್ರಿ ಪತ್ತೆ ಮಾಡಲಾಗುತ್ತಿದೆ. 12062 ಸೋಂಕಿತನಿಂದ 35 ರ ಪುರುಷ, 26ರ ಯುವಕ ಹಾಗೂ ಕುವೈಟ್  ನಿಂದ ವಾಪಸ್ಸಾದ ವ್ಯಕ್ತಿಯಲ್ಲಿ ಸೋಂಕು ದೃಢಟ್ಟಿದೆ.

ಮುಂಡಗೋಡ ತಾಲೂಕಿನಲ್ಲಿ ಇಬ್ಬರಿಗೆ  ಸೋಂಕು ತಗುಲಿದ್ದು ಅದರಲ್ಲಿ 26 ವರ್ಷದ ಪುರುಷ 23158 ಸೋಕಿತನಿಂದ ಕೊರೊನಾ ಬಂದಿದ್ದೆ. ಇನ್ನೊಂದು ಪ್ರಕರಣದಲ್ಲಿ 51 ರ ಪುರುಷನ ಟ್ರಾವೇಲ್ ಹಿಸ್ಟ್ರೀ ಪತ್ತೆ ಮಾಡಲಾಗುತ್ತಿದೆ. ಕುಮಟಾ ತಾಲೂಕಿನಲ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು 42ರ ಪುರುಷ ಮುಂಬಯಿನಿಂದ ವಾಪಸ್ಸಾಗಿದ್ದು ಇನ್ನೊಬ್ಬ 73 ವೃದ್ಧನ ಟ್ರಾವೇಲ್  ಹಿಸ್ಟ್ರಿ ಪತ್ತೆಯಾಗಿಲ್ಲ.

ಕಾರವಾರ ತಾಲೂಕಿನಲ್ಲಿ ಎರಡು ಸೋಂಕು ಪತ್ತೆಯಾಗಿದ್ದು 40 ರ ಪುರುಷ ಗೋವಾದಿಂದ ವಾಪಸ್ಸಾಗಿದ್ದು 42ರ ಮಹಿಳೆ 25449 ಸೋಕಿತನಿಂದ ಕೊರೊನಾ ಬಂದಿದೆ. ಹೊನ್ನಾವರ ತಾಲೂಕಿನಲ್ಲಿ 37ರ ಪುರುಷನಿಗೆ ಪ್ರಾಥಮಿಕ ಸಂಪರ್ಕ, ಕುವೈಟ್ ನಿಂದ ಬಂದ 35 ರ ವ್ಯಕ್ತಿಗೆ ಸೋಂಕು ತಗುಲಿದೆ. ಅದರಂತೆ ಭಟ್ಕಳದ 40ರ ಪುರುಷನಾಗಿದ್ದು ಟ್ರಾವೇಲ್ ಹಿಸ್ಟ್ರಿ ಪತ್ತೆ ಮಾಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು