News Karnataka Kannada
Wednesday, April 24 2024
Cricket
ಕರ್ನಾಟಕ

ಉ.ಕನ್ನಡದಲ್ಲಿ 47ಕೊರೊನಾ ಸೋಂಕಿತರ ದೃಢ: 85 ಜನ ಗುಣಮುಖರಾಗಿ ಬಿಡುಗಡೆ

Photo Credit :

 ಉ.ಕನ್ನಡದಲ್ಲಿ 47ಕೊರೊನಾ ಸೋಂಕಿತರ ದೃಢ: 85 ಜನ ಗುಣಮುಖರಾಗಿ ಬಿಡುಗಡೆ

 ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಸೋಂಕಿತ ಪ್ರಕರಣಗಳು ಏರಿಕೆಯಾಗಿದೆ. ಮಂಗಳವಾರ ಜಿಲ್ಲೆಯಲ್ಲಿ 47 ಪ್ರಕರಣಗಳು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟೂ 1832 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಕಾರವಾರ 8, ಹೊನ್ನಾವರ 5, ಭಟ್ಕಳ 4, ಶಿರಸಿ 9, ಸಿದ್ದಾಪುರ 1, ಮುಂಡಗೋಡ 5, ಹಳಿಯಾಳದಲ್ಲಿ 15 ಪ್ರಕರಣಗಳು ದಾಖಲಾಗಿದೆ. ಸೋಂಕಿರ ಪ್ರಕರಣಗಳ ಸಂಖ್ಯೆಯ ಹೆಚ್ಚಳದಿಂದ ಜನರು ಆತಂಕ ವ್ಯಕ್ತಪಡಿಸುವಂತಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಜಿಲ್ಲೆಯಲ್ಲಿ ಮಂಗಳವಾರ 85 ಜನರು ಗುಣಮುಖರಾಗಿ ಬಿಡುಗುಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 1110 ಜನರು ಗುಣಮುಖರಾಗಿದ್ದಾರೆ. ಇಂದು ಕಾರವಾರ 7, ಕುಮಟಾ 19, ಹೊನ್ನಾವರ 3, ಶಿರಸಿ 22, ಸಿದ್ದಾರಪುರ 7, ಹಳಿಯಾಳ 25, ಜೊಯಿಡಾದಲ್ಲಿ 2 ಜನರು ಗುಣಮುಖರಾಗಿದ್ದಾರೆ. ಪತ್ತೆಯಾದ ಪ್ರಕರಣಗಳಿಗಿಂತ ಹೆಚ್ಚು ಜನರು ಬಿಡುಗಡೆಯಾಗಿದ್ದು ಜನರಲ್ಲಿ ಸಮಾಧಾನ ತಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು