News Karnataka Kannada
Monday, April 22 2024
Cricket
ಕರ್ನಾಟಕ

ಉನ್ನತ ಶಿಕ್ಷಣದ ಮೇಲೆ ಕೋವಿಡ್-19 ಪರಿಣಾಮಗಳ ಬಗ್ಗೆ ಅಂತಾರಾಷ್ಟ್ರೀಯ ವೆಬಿನಾರ್

Photo Credit :

ಉನ್ನತ ಶಿಕ್ಷಣದ ಮೇಲೆ ಕೋವಿಡ್-19 ಪರಿಣಾಮಗಳ ಬಗ್ಗೆ ಅಂತಾರಾಷ್ಟ್ರೀಯ ವೆಬಿನಾರ್

ತುಮಕೂರು: ಉನ್ನತ ಶಿಕ್ಷಣದ ಮೇಲೆ ಕೋವಿಡ್-19 ಪರಿಣಾಮಗಳ ಬಗ್ಗೆ ಅಂತಾರಾಷ್ಟ್ರೀಯ ವೆಬಿನಾರ್ ಅನ್ನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ: ೨೭.೦೫.೨೦೨೧ ರಂದು ಏರ್ಪಡಿಸಲಾಗಿದೆ. ಈ ಅಂತಾರಾಷ್ಟ್ರೀಯ ವೆಬಿನಾರ್ ಅನ್ನು ಯುಜಿಸಿ ಸದಸ್ಯರಾದ ಪ್ರೊ. ಸುಷ್ಮಾ ಯಾದವ್ ಅವರು ಉದ್ಘಾಟಿಸಲಿದ್ದು, ತುಮಕೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಕರ್ನಲ್ (ಪ್ರೊ) ವೈ ಎಸ್ ಸಿದ್ದೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

 

 ಈ ಸಮ್ಮೇಳನದಲ್ಲಿ ಸಿಂಗಪೂರ್, ಮಲೇಷಿಯಾ, ಅಮೆರಿಕಾ, ಈಜಿಪ್ಟ್ ಹಾಗೂ ಇರಾನ್ ದೇಶದ ತಜ್ಞರುಗಳು ವಿಷಯ ಮಂಡಿಸಲಿದ್ದಾರೆ. ಈಗಾಗಲೇ ಈ ಸಮ್ಮೇಳನಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ೧೮೦೦ ಕ್ಕಿಂತ ಹೆಚ್ಚು ಪ್ರತಿನಿಧಿಗಳು ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ತುಮಕೂರು ವಿಶ್ವವಿದ್ಯಾನಿಲಯದ ಅಂತರ್ಜಾಲ ತಾಣದಲ್ಲಿ ವೀಕ್ಷಿಸಬಹುದೆಂದು ಸಮ್ಮೇಳನದ ನಿರ್ದೇಶಕರು ಹಾಗೂ ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಪ್ರೊ. ಕೆ. ಶಿವಚಿತ್ತಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು