News Karnataka Kannada
Sunday, April 14 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 53 ಕೊರೊನಾ ಪ್ರಕರಣ ದೃಢ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 53 ಕೊರೊನಾ ಪ್ರಕರಣ ದೃಢ

ಕಾರವಾರ: ಜಿಲ್ಲೆಯಲ್ಲಿ ಸೋಮವಾರ 53 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 2835 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಕಾರವಾರ 4, ಕುಮಟಾ 3, ಹೊನ್ನಾವರ 3, ಭಟ್ಕಳ 6, ಶಿರಸಿ 3, ಸಿದ್ದಾಪುರ 3, ಯಲ್ಲಾಪುರ 2, ಹಳಿಯಾಳದಲ್ಲಿ 29 ಸೋಂಕಿತರು ಪತ್ತೆಯಾಗಿದ್ದಾರೆ. ನಿತ್ಯ ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಲೇ  ಇದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

40 ಜನರ ಗುಣಮುಖ:ಜಿಲ್ಲೆಯ ವಿವಿಧ ಕೊವಿಡ್ ವಾರ್ಡ್ ನಲ್ಲಿದ್ದ ಸೋಂಕಿತರ ಪೈಕಿ 40 ಜನರು ಸೋಮವಾರ ಗುಣಮುಖರಾಗಿದ್ದಾರೆ. ಈ ಪೈಕಿ ಕಾರವಾರ 4,  ಅಂಕೋಲಾ 7,ಹೊನ್ನಾವರ 5, ಯಲ್ಲಾಪುರ 1, ಹಳಿಯಾಳದಲ್ಲಿ 23 ಜನರು ಗುಣಮುಖರಾಗಿದ್ದಾರೆ.

ಈವರೆಗೆ 1927 ಜನರು ಕೊರೊನಾ ಸೋಂಕಿನಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆದು ಕಡಿಮೆಯಾಗುತ್ತಿರುವವರ ಪ್ರಮಾಣವೂ ಇದ್ದರಿಂದ ಜನರಿಗೆ ಸಮಾಧಾನ ತಂದಿದೆ.

ಸದ್ಯ ಜಿಲ್ಲೆಯಲ್ಲಿ 882 ಕೊರೊನಾ ಸೋಂಕಿತ ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 114 ಜನರು ಈವರೆಗೆ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳಿಗೆ  ಸಂಬಂಧಿಸಿದಂತೆ ಕಾರವಾರದಲ್ಲಿ 166, ಅಂಕೋಲಾ 31, ಕುಮಟಾ 65, ಹೊನ್ನಾವರ 48, ಭಟ್ಕಳ 91, ಶಿರಸಿ 48, ಸಿದ್ದಾಪುರ 18, ಯಲ್ಲಾಪುರ 47, ಮುಂಡಗೋಡ 83, ಹಳಿಯಾಳ 266, ಜೊಯಿಡಾದಲ್ಲಿ 19 ಪ್ರಕರಣಗಳು ಸಕ್ರಿಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು