News Karnataka Kannada
Friday, April 12 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 90 ಜನರ ಗುಣಮುಖ: 85 ಹೊಸ ಪ್ರಕರಣ ದೃಢ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 90 ಜನರ ಗುಣಮುಖ: 85 ಹೊಸ ಪ್ರಕರಣ ದೃಢ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ರವಿವಾರ 85 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1753ಗೆ ಗೆ ಏರಿಕೆಯಾಗಿದೆ.

ಈ ಪೈಕಿ ಕಾರವಾರ 13, ಅಂಕೋಲಾ 5, ಕುಮಟಾ 13, ಹೊನ್ನಾವರ 4, ಭಟ್ಕಳ 11, ಶಿರಸಿ 9,  ಯಲ್ಲಾಪುರ 1, ಮುಂಡಗೋಡ 3, ಹಳಿಯಾಳದಲ್ಲಿ 26 ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಜನರು ಆತಂಕದಲ್ಲಿದ್ದಾರೆ.

90 ಜನ ಗುಣಮುಖ:ಜಿಲ್ಲೆಯಲ್ಲಿ ರವಿವಾರ 90 ಜನ ಕೊರೊನಾ ಸೋಂಕಿನಿಂದ ಮುಕ್ತಿ ಪಡೆದಿದ್ದಾರೆ. ಚಿಕಿತ್ಸೆಗೆ ಒಳಗಾದವರ ಪೈಕಿ 90 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 2, ಕುಮಟಾ 18, ಹೊನ್ನಾವರ 13, ಸಿದ್ದಾಪುರ 4, ಯಲ್ಲಾಪುರ 4, ಮುಂಡಗೋಡ 3 ,ಹಳಿಯಾಳ 44 ಹಾಗೂ ಜೊಯಿಡಾದಲ್ಲಿ 2 ಜನರು ಗುಣಮುಖರಾಗಿದ್ದಾರೆ. ಇದರಿಂದಾಗಿ ಇಂದು ಪತ್ತೆಯಾದ ಸೋಂಕಿತರಿಗಿಂದ ಹೆಚ್ಚು ಗುಣಮುಖರಾದವರ ಸಂಖ್ಯೆಯೇ ಹೆಚ್ಚು ಜನರಲ್ಲಿ ಕೊಂಚ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ 716 ಸೋಂಕಿತರು ಸಕ್ರಿಯ:ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ನಲ್ಲಿ ಒಟ್ಟೂ 716 ಕೊರೊನಾ ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಈ ಪೈಕಿ ಹಳಿಯಾಳದಲ್ಲಿ 272 ಸಕ್ರಿಯ ಪ್ರಕರಣವಿದ್ದು ಕಾರವಾರ 75, ಅಂಕೋಲಾ 47, ಕುಮಟಾ 78, ಹೊನ್ನಾವರ 26, ಭಟ್ಕಳ 76, ಶಿರಸಿ 79, ಸಿದ್ದಾಪುರ 15, ಯಲ್ಲಾಪುರ 15, ಮುಂಡಗೋಡ 27, ಜೊಯಿಡಾ ತಾಲೂಕಿನಲ್ಲಿ 6 ಜನ ಸೋಂಕಿತರು ಸಕ್ರಿಯವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. 

ಈ ನಡುವೆ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಭೀತಿಯ ನಡುವೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಸರಿ ಸಮಾನವಾಗಿದ್ದು ಜನ ಹಾಗೂ ವೈದ್ಯಕೀಯ ವಲಯದಲ್ಲಿ ಕೊಂಚ ಸಮಾಧಾನ ಮೂಡಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟೂ ಶೇ.50ಕ್ಕಿಂತ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಪತ್ತೆಯಾದ ಸೋಂಕಿತರ ಪೈಕಿ 268 ಜನರು ಗುಣಮುಖರಾಗಿದ್ದು ಕಾರವಾರ 64, ಅಂಕೋಲಾ 36, ಕುಮಟಾ 135, ಹೊನ್ನಾವರ 91, ಶಿರಸಿ 62, ಸಿದ್ದಾಪುರ 16, ಯಲ್ಲಾಪುರ 59, ಮುಂಡಗೋಡ 63, ಹಳಿಯಾಳ 134, ಜೊಯಿಡಾದಲ್ಲಿ 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು