News Karnataka Kannada
Saturday, April 13 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸೋಂಕಿತರ ಸಾವು: ಸಾವಿನ ಸಂಖ್ಯೆ 17ಕ್ಕೆ ಏರಿಕೆ  

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರು ಸೋಂಕಿತರ ಸಾವು: ಸಾವಿನ ಸಂಖ್ಯೆ 17ಕ್ಕೆ ಏರಿಕೆ   

ಕಾರವಾರ:ಜಿಲ್ಲೆಯ ಕೊರೊನಾ ಸೋಂಕಿಗೆ ಚಿಕಿತ್ಸೆ  ಪಡೆಯುತ್ತಿದ್ದವರ ಪೈಕಿ ಮೂವರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಹಳಿಯಾಳದಲ್ಲಿ ಇಬ್ಬರು ಹಾಗೂ ಶಿರಸಿ ಮೂಲದ ವ್ಯಕ್ತಿ ಕಾರವಾರದ ಕಿಮ್ಸ್ ಆಸ್ಪತ್ರೆಯಲ್ಲಿ ಮೃಪಟ್ಟಿದ್ದಾರೆ. ಜಿಲ್ಲೆಯ ಕಾರವಾರ 1, ಅಂಕೋಲಾ 1, ಭಟ್ಕಳ 6, ಶಿರಸಿ 2, ಯಲ್ಲಾಪುರ 1, ಮುಂಡಗೋಡ 1, ಹಳಿಯಾಳದಲ್ಲಿ ಮೂವರು ಮೃತಪಟ್ಟಿದ್ದಾರೆ.

ಹಳಿಯಾಳದಲ್ಲಿ ಕೊರೊನಾ ಸೋಂಕು ಒಂದೇ ಸಮನೆ ಏರಿಕೆಯಾಗಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಿದ್ದು ಹಳಿಯಾಳದಲ್ಲೇ ಅತೀ ಹೆಚ್ಚು ದಾಖಲಾಗಿದೆ. ಕಳೆದ ಕೆಲವು ದಿನ ಅವಧಿಯಲ್ಲಿ ಹಳಿಯಾಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದ್ದವು. ಆದರೆ ಈಗ ಭಟ್ಕಳವನ್ನು ಹಿಂದಿಕ್ಕಿ ಒಟ್ಟೂ 411 ಕೊರೊನಾ ಸೋಂಕಿತರು ಪತ್ತೆಯಾಗಿ, ಮೊದಲ ಸ್ಥಾನದಲ್ಲಿದೆ. 386 ಪ್ರಕಣ ದಾಖಲಾಗಿರುವ ಭಟ್ಕಳ ಎರಡನೇ ಸ್ಥಾನದಲ್ಲಿದಲ್ಲಿದೆ. ನಿತ್ಯವೂ ಹಳಿಯಾಳದಲ್ಲಿ ಸೋಂಕಿತರು ಪತ್ತೆಯಾಗುತ್ತಿದೆ. 

ಜಿಲ್ಲೆಯ ಕೊರೊನಾ ಸ್ಥಿತಿ ಹೇಗಿದೆ :ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 1753 ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ. ಈ ಪೈಕಿ ಕಾರವಾರದಲ್ಲಿ 146, ಅಂಕೋಲಾ 92, ಕುಮಟಾ 217, ಹೊನ್ನಾವರ 118, ಭಟ್ಕಳ 386, ಶಿರಸಿ 161, ಸಿದ್ದಾಪುರ 31, ಯಲ್ಲಾಪುರ 84, ಮುಂಡಗೋಡ 93, ಹಳಿಯಾಳ 411, ಜೊಯಿಡಾ 14 ಜನ ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ.  ಪತ್ತೆಯಾದ ಸೋಂಕಿತರ ಪೈಕ 936 ಜನರ ಗುಣಮುಖರಾಗಿದ್ದು 716 ಜನರು ಆಸ್ಪತ್ರೆಯಲ್ಲಿದ್ದಾರೆ. 16 ಜನ ಮೃತಪಟ್ಟಿದ್ದು 85 ಜನರು ವಿವಿಧ ತಾಲೂಕಿನಲ್ಲಿ ಹೋಮ್ ಐಸೋಲೇಶನ್ ನಲ್ಲಿದ್ದಾರೆ.   

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು