News Karnataka Kannada
Thursday, April 25 2024
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ: ಸಚಿವ ಶಿವರಾಮ್ ಹೆಬ್ಬಾರ್  

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ: ಸಚಿವ ಶಿವರಾಮ್ ಹೆಬ್ಬಾರ್   

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿ ಮಾಡುವುದಿಲ್ಲ ಎಂದು ರಾಜ್ಯ ಕಾರ್ಮಿಕ ಮತ್ತು ಸಕ್ಕರೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರೆಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.  ಈಗಾಗಲೇ ಭಟ್ಕಳ ವ್ಯಾಪ್ತಿಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಉಳಿದ  ಹಲವು ತಾಲೂಕುಗಳಲ್ಲಿ  ಮಧ್ಯಾಹ್ನ 2 ಗಂಟೆ ಬಳಿಕ ಸಾರ್ವಜನಿಕರೇ   ಸ್ವಯಂ ಘೋಷಿತ  ಬಂದ್ ಜಾರಿಗೆ ತಂದಿದ್ದಾರೆ.

ಸ್ವಯಂ ಘೋಷಿತ ಬಂದ್ ನಡೆಸುವುದಕ್ಕೆ ಜಿಲ್ಲಾಡಳಿತ ಬೆಂಬಲ ನೀಡುತ್ತದೆ ಎಂದರು. ಭಟ್ಕಳದಲ್ಲಿ ಪ್ರತಿದಿನ 2 ಗಂಟೆಯವರೆಗೆ ಈಗಾಗಲೇ ಸರ್ಕಾರದಿಂದ ಜಾರಿಗೊಳಿಸಿರುವ ಲಾಕ್ಡೌನ್ ಯಥಾಪ್ರಕಾರ ಮುಂದುವರೆಯುತ್ತದೆ. ವಿದೇಶಗಳಿಂದ ಮತ್ತು ಹೊರರಾಜ್ಯಗಳಿಂದ ಬಂದವರಿಂದಾಗಿ ಭಟ್ಕಳದಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಭಟ್ಕಳದಲ್ಲಿ ಕೋವಿಡ್ ಪರೀಕ್ಷೆಯನ್ನು ಇನ್ನಷ್ಟು ತ್ವರಿತವಾಗಿ  ಮಾಡಲು ತೀರ್ಮಾನಿಸಲಾಗಿದೆ.

ಭಟ್ಕಳದಲ್ಲಿ ಮಾತ್ರ ಹೆಚ್ಚಿನ ಪ್ರಕರಣಗಳವಿದ್ದರಿಂದ, ಹೊರಗಡೆಯಿಂದ ಬಂದವರು ಕಾರಣ. ಇನ್ನಷ್ಟು ವೇಗದಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೊರ ರಾಜ್ಯ, ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಿದೆ. ಟೆಸ್ಟ್ ಸಹ ಹೆಚ್ಚಿಸಲಾಗುತ್ತಿದೆ. ಸಮಸ್ಯೆಗಳು ಬಂದರೆ ತಿಳಿಸಿ. ಎಲ್ಲ ಮಾಹಿತಿಗಳನ್ನು ನೀಡಿ. ನಿಮಗೂ, ಕುಟುಂಭಕ್ಕೆ ತೊಂದರೆ ಮಾಡಿಕೊಳ್ಳಬೇಡಿ. ಆಸ್ಪತ್ರೆಗೆ ಸಂಪೂರ್ಣ ಮಾಹಿತಿ ನೀಡಿ. ಜಿಲ್ಲೆಯಲ್ಲಿ ಸರಾಸರಿ 30 ಕೋವಿಡ್ ಸೋಂಕಿತದ್ದಾರೆ. ನಿತ್ಯ 10 ರಿಂದ 12 ಜನರು ಗುಣಮುಖರಾಗಿ ಬಿಡುಗಡೆಯಾಗುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕೋವಡ್ ಸಮಸ್ಯೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಾ ಬಂದಿದ್ದೇವೆ. 2500 ಬೆಡ್ ಕೋವಿಡ್ ಕಾರಣಕ್ಕೆ ನಮ್ಮ ಬಳಿ ಇದೆ. ಜಿಲ್ಲಾಡಳಿತ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದಿನ ನಮ್ಮ ಕೋವಿಡ್ ಲ್ಯಾಬ್ ನಲ್ಲಿ 900 ಕೋವಿಡ್ ಟೆಸ್ಟ್ ಆಗಿದೆ. ಹೆಚ್ಚು ಟೆಸ್ಟ್ ಮಾಡಿದಂತೆ ಜಿಲ್ಲೆಯ ಜನರ ಆರೋಗ್ಯ ಮೇಲೆ ಪರಿಣಾಮವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ  ಮೃತ ಕೋವಿಡ್ ಟೆಸ್ಟ್ 2 ತಾಸು, ಇನ್ಟಿಟ್ಯೂಟ್, ಪೊಲೀಸ್ ಠಾಣೆ ಬ್ಯಾಂಕ್ ಆಸ್ಪತ್ರೆ ತಹಸೀಲ್ದಾರ್, ಆಸ್ಪತ್ರೆಯ ಟೆಸ್ಟ್ ಮಾಡಬೇಕು ಎಂದು ಬಂದಾಗ ಅಲ್ಲಿ ಎರಡನೇ ಆದ್ಯತೆ ನೀಡಲಾಗುವುದು. ವಯಸ್ಸಾದವರೆಗೆ ಆದ್ಯತೆ, ಉಳಿದವರ ಟೆಸ್ಟ್ ಗಳು ಮಾಡಬೇಕು ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.   

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು