News Karnataka Kannada
Wednesday, April 24 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಜನ ಗುಣಮುಖ: 32 ಹೊಸ ಪ್ರಕರಣ ದೃಢ  

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 89 ಜನ ಗುಣಮುಖ: 32 ಹೊಸ ಪ್ರಕರಣ ದೃಢ   

ಕಾರವಾರ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆ ಪಡೆಯುತ್ತಿದ್ದವ ಪೈಕಿ 89 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಅದರಂತೆ 32 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ.  ಈ ಮೂಲಕ ಜಿಲ್ಲೆಯಲ್ಲಿ ಒಟ್ಟೂ 1785 ಪ್ರಕರಣ ದಾಖಲಾಗಿದೆ.

  ಜಿಲ್ಲೆಯಲ್ಲಿ 89 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಪೈಕಿ ಕಾರವಾರ 3, ಅಂಕೋಲಾ 23, ಕುಮಟಾ 23, ಹೊನ್ನಾವರ 2, ಶಿರಸಿ 9, ಯಲ್ಲಾಪುರ 11, ಮುಂಡಗೋಡ 4, ಹಳಿಯಾಳದಲ್ಲಿ 14 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಎಲ್ಲರ ವರದಿ ನೆಗೆಟಿವ್ ಬಂದ್ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಅದರಂತೆ ಹೊನ್ನಾವರ 2, ಭಟ್ಕಳ 6, ಶಿರಸಿ 2, ಹಳಿಯಾಳ 21, ಹಾಗೂ ಜೊಯಿಡಾದಲ್ಲಿ 1 ಪ್ರಕರಣ ದಾಖಲಾಗಿದೆ. ಹಳಿಯಾಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಜನರು ಆತಂಕದಲ್ಲಿದ್ದಾರೆ. ವಿವಿಧ ಕೋವಿಡ್ ವಾರ್ಡ್ ನಲ್ಲಿ ಒಟ್ಟೂ 675 ಕೊರೊನಾ ಸಕ್ರಿಯ ಪ್ರಕರಣಗಳಿದ್ದು ಸಕ್ರಿಯವಾಗಿದ್ದು ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಜಿಲ್ಲೆಯ ಹಳಿಯಾಳದಲ್ಲಿ 279 ಸಕ್ರಿಯ ಪ್ರಕರಣವಿದ್ದು ಕಾರವಾರ 72, ಅಂಕೋಲಾ 23 ಕುಮಟಾ 50, ಹೊನ್ನಾವರ 24, ಭಟ್ಕಳ 97, ಶಿರಸಿ 70, ಸಿದ್ದಾಪುರ 15, ಯಲ್ಲಾಪುರ 13, ಮುಂಡಗೋಡ 24, ಜೊಯಿಡಾ ತಾಲೂಕಿನಲ್ಲಿ 7 ಜನ ಸೋಂಕಿತರು ಸಕ್ರಿಯವಾಗಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.  

ಒಟ್ಟು ಪ್ರಕರಣಗಳೆಷ್ಟು:ಜಿಲ್ಲೆಯಲ್ಲಿ ಈವರೆಗೆ ಒಟ್ಟೂ 1785 ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ. ಈ ಪೈಕಿ ಕಾರವಾರದಲ್ಲಿ 146, ಅಂಕೋಲಾ 92, ಕುಮಟಾ 217, ಹೊನ್ನಾವರ 120, ಭಟ್ಕಳ 392, ಶಿರಸಿ 163, ಸಿದ್ದಾಪುರ 31, ಯಲ್ಲಾಪುರ 84, ಮುಂಡಗೋಡ 93, ಹಳಿಯಾಳ 432, ಜೊಯಿಡಾ 15 ಜನ ಕೊರೊನಾ ಸೋಂಕಿತರ ಪತ್ತೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಕೊರೊನಾ ಸೋಂಕಿನ ಆತಂಕದಲ್ಲಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು