News Karnataka Kannada
Wednesday, April 17 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನಕ್ಕೆ ಶತಕ ಬಾರಿಸಿದ ಕೊರೊನಾ :115 ಕೊರೊನಾ ಸೋಂಕು ದೃಢ

Photo Credit :

 ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನಕ್ಕೆ ಶತಕ ಬಾರಿಸಿದ ಕೊರೊನಾ :115 ಕೊರೊನಾ ಸೋಂಕು ದೃಢ

ಕಾರವಾರ: ಜಿಲ್ಲೆಯಲ್ಲಿ ಶನಿವಾರ ಅತೀ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ. ಒಂದೇ ದಿನಕ್ಕೆ 115 ಪ್ರಕರಣಗಳು ಪತ್ತೆಯಾಗುವ ಮೂಲಕ ನೂರು ಪ್ರಕರಣಗಳು ಒಂದೇ ದಿನಕ್ಕೆ ದಾಖಲಾಗಿದೆ.

ಹಳಿಯಾಳ ತಾಲೂಕಿನಲ್ಲಿ ಕೊರೊನಾ ಒಟ್ಟೂ 52 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ. ಕಾರವಾರದಲ್ಲಿ 11, ಭಟ್ಕಳ 10, ಮುಂಡಗೋಡ 9, ಅಂಕೋಲಾ ಹಾಗೂ ಕುಮಟಾಗಳಲ್ಲಿ ತಲಾ 8, ಶಿರಸಿ 7, ಹೊನ್ನಾವರ 6, ಸಿದ್ದಾಪುರ 3 ಹಾಗೂ ಯಲ್ಲಾಪುರದಲ್ಲಿ ಒಂದು ಪ್ರಕರಣಗಳು ದೃಢ ಪಟ್ಟಿವೆ.

ಹಳಿಯಾಳದಲ್ಲಿ 25, 20, 26, 29, 19, 27 ವರ್ಷದ ಯುವತಿಯರಲ್ಲಿ, 15ರ ಬಾಲಕಿಯಲ್ಲಿ, 55, 60, 55, 48 ರ ಮಹಿಳೆಯರಲ್ಲಿ, 29, 32, 20, 30, 32 ರ ಯುವಕರಲ್ಲಿ, 50 ರ ಪುರುಷನಲ್ಲಿ ಈ 17 ಮಂದಿಯಲ್ಲಿ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಆತಂಕ್ಕೆ ಎಡೆ ಮಾಡಿದೆ. 45, 38, 43, 60, 50, 41, 40ರ ಪುರುಷಲ್ಲಿ, 19, 30, 35, 30, 28ರ ಯುವಕರಲ್ಲಿ, 20, 32, 23ರ ಯುವತಿಯರಲ್ಲಿ, 50, 49ರ ಮಹಿಳೆಯರಲ್ಲಿ ಈ ಒಟ್ಟೂ 17 ಮಂದಿಯಲ್ಲಿ ಐಎಲ್‍ಐ ಪ್ರಕರಣ ದೃಢ ಪಟ್ಟಿದೆ. ಇನ್ನು ಸೋಂಕಿತರ ಸಂಪರ್ಕದಿಂದಾಗಿ 32, 48, 30, 65, 42 ರ ಮಹಿಳೆಯರಲ್ಲಿ 45, 65, 38, 52, 18, 23, 26, 45, 43, 29, 42, 20ರ ಪುರುಷರಲ್ಲಿ ಹಾಗೂ 1 ವರ್ಷದ ಗಂಡು ಮಗುವಿನಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.

ಮುಂಡಗೋಡದ ಒಟ್ಟೂ 9 ಪ್ರಕರಣಗಳಲ್ಲಿ 37ರ ಓರ್ವ, 41ರ ಇಬ್ಬರು ಮಹಿಳೆಯರು ಹಾಗೂ 28ರ ಯುವಕನಲ್ಲಿ ಸೋಂಕಿತರ ಸಂಪರ್ಕದಿಂದಾಗಿ ಕೊರೊನಾ ದೃಢ ಪಟ್ಟಿದೆ. ಪ್ರಯಾಣದ ಇತಿಹಾಸ ಹೊಂದಿರುವ 27, 30, 38, 30 ರ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದ್ದು ಇನ್ನೋರ್ವ 32ರ ಯುವತಿಯಲ್ಲೂ ಸೋಂಕು ದೃಢ ಪಟ್ಟಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ.
ಕಾರವಾರದ ಒಟ್ಟೂ 11 ಪ್ರಕರಣಗಳಲ್ಲಿ 29 ವರ್ಷದ ಓರ್ವ ಪುರುಷನಲ್ಲಿ ಸಾರಿ ಪ್ರಕರಣ ದೃಢ ಪಟ್ಟಿದ್ದು 31, 66, 38ರ ವ್ಯಕ್ತಿಗಳಲ್ಲಿ ಮತ್ತು 58ರ ಮಹಿಳೆಯಲ್ಲಿ ಐಎಲ್‍ಐ ಪ್ರಕರಣ ದೃಢ ಪಟ್ಟಿದೆ. 32, 26ರ ಯುವಕರಲ್ಲಿ 50, 33, 31ರ ಮಹಿಳೆಯರಲ್ಲಿ ಹಾಗೂ 14ರ ಬಾಲಕಿಯಲ್ಲಿ ಸೋಂಕು ದೃಢ ಪಡ್ಟಿದ್ದು ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ.

ಭಟ್ಕಳದ 29, 40, 50, 32, 30, 50, 53ರ ವ್ಯಕ್ತಿಗಳಲ್ಲಿ 75, 78, 45 ರ ಮಹಿಳೆಯರಲ್ಲಿ ಸೋಂಕು ದೃಢ ಪಟ್ಟಿದ್ದು ಈ ಒಟ್ಟೂ 10 ಮಂದಿಯ ಸೋಂಕಿನ ಮೂಲವೇ ಪತ್ತೆಯಾಗಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಕುಮಟಾದ ಒಟ್ಟೂ 8 ಪ್ರಕರಣಗಳಲ್ಲಿ 32, 44, 54ರ ಮಹಿಳೆಯರು, 3 ವರ್ಷದ ಬಾಲಕಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ದೃಢ ಪಟ್ಟಿದ್ದು ಪ್ರಯಾಣದ ಇತಿಹಾದ ಇರುವ 38 ಹಾಗೂ 26ರ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿನ ಮೂಲವೇ ಗೊತ್ತಿಲ್ಲದ 59ರ ವ್ಯಕ್ತಿ ಹಾಗೂ 29ರ ಮಹಿಳೆಯಲ್ಲಿ ಕೊರೊನಾ ದೃಢ ಪಟ್ಟಿದೆ.

ಅಂಕೋಲಾದಲ್ಲಿ ಒಟ್ಟೂ 8 ಪ್ರಕರಣಗಳು ದೃಢಪಟ್ಟಿದ್ದು ಪ್ರಯಾಣದ ಇತಿಹಾಸ ಇರುವ 10ರ ಬಾಲಕ, 26ರ ಯುವತಿ, ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 41, 43ರ ವ್ಯಕ್ತಿ, 75ರ ವೃದ್ಧೆ ಹಾಗೂ 7ರ ಬಾಲಕಿಯಲ್ಲಿ ಕೊರೊನಾ ದೃಢ ಪಟ್ಟಿದ್ದು, 16ರ ಬಾಲಕಿ, 42ರ ವ್ಯಕ್ತಿಯಲ್ಲಿ ಐಎಲ್‍ಐ ಪ್ರಕರಣ ದೃಢ ಪಟ್ಟಿದೆ.

ಹೊನ್ನಾವರದ ಒಟ್ಟೂ 6 ಪ್ರಕರಣಗಳಲ್ಲಿ 29 ರ ಯುವತಿಯಲ್ಲಿ ಐಎಲ್‍ಐ ಪ್ರಕರಣ, 32ರ ಮೂವರು, 35 ಹಾಗೂ 46ರ ಪುರುಷರಲ್ಲಿ ಸೋಂಕು ಪತ್ತೆಯಾಗಿದ್ದು ಸಂಪರ್ಕ ಪತ್ತೆಯಾಗಿಲ್ಲ. ಸಿದ್ದಾಪುರದಲ್ಲಿ 32, 24, 18ರ ವ್ಯಕ್ತಿಗಳಲ್ಲಿ ಮೂರು ಪ್ರಕರಣಗಳು ದೃಢ ಪಟ್ಟಿದ್ದು ಸೋಂಕಿನ ಮೂಲ ಪತ್ತೆಯಾಗಿಲ್ಲ. ಇನ್ನು ಯಲ್ಲಾಪುರದಲ್ಲಿ ಸೋಂಕಿನ ಮೂಲವೇ ಪತ್ತೆಯಾಗದೇ 22 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು