News Karnataka Kannada
Saturday, April 13 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 236 ಕೊರೊನಾ ಪ್ರಕರಣ ದೃಢ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 236 ಕೊರೊನಾ ಪ್ರಕರಣ ದೃಢ

ಕಾರವಾರ: ಜಿಲ್ಲೆಯಲ್ಲಿ 236 ಹೊಸ ಕೊರೊನಾ ಸೋಂಕಿತರು ಪತ್ತೆಯಾದ್ದು ಇದರಿಂದ ಜಿಲ್ಲೆಯಲ್ಲಿ ಈವರೆಗೆ 5336 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಬುಧವಾರ ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 69, ಅಂಕೋಲಾ 33, ಕುಮಟಾ 30, ಹೊನ್ನಾವರ 27, ಭಟ್ಕಳ 1, ಶಿರಸಿ 4, ಸಿದ್ದಾಪುರ 32, ಯಲ್ಲಾಪುರ 24, ಹಳಿಯಾಳದಲ್ಲಿ 16 ಪ್ರಕರಣಗಳು ಪತ್ತೆಯಾಗಿದೆ. ಕಾರವಾರದಲ್ಲಿ ಬುಧವಾರ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಭೀತಿ ಮೂಡಿಸಿದೆ.

82  ಜನ ಗುಣಮುಖ

ಜಿಲ್ಲೆಯ ವಿವಿಧ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ ಬುಧವಾರ 82 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 4520 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 13, ಅಂಕೋಲಾ 4, ಕುಮಟಾ 13, ಹೊನ್ನಾವರ 39, ಮುಂಡಗೋಡ 4 ಹಳಿಯಾಳ 7 ಹಾಗೂ ಜೊಯಿಡಾದಲ್ಲಿ 2 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಜನರಿಗೆ ಕೊಂಚ ಸಮಾಧಾನ ತಂದಿದೆ.

ಜಿಲ್ಲೆಯಲ್ಲಿ ಇಬ್ಬರ ಸಾವು

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ಹೊನ್ನಾವರ ಹಾಗೂ ಅಂಕೋಲಾದಲ್ಲಿ ತಲಾ ಓರ್ವ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

ಅದರಂತೆ ಜಿಲ್ಲೆಯ ಕಾರವಾರದಲ್ಲಿ 8, ಅಂಕೋಲಾ 5, ಕುಮಟಾ 1, ಹೊನ್ನಾವರ 8, ಭಟ್ಕಳ 14, ಶಿರಸಿ 8, ಯಲ್ಲಾಪುರ 1, ಮುಂಡಗೋಡ 4, ಹಳಿಯಾಳದಲ್ಲಿ 17 ಜನರು ಈವರೆಗೆ ಮೃತಪಟ್ಟಿದ್ದಾರೆ. ಇತರ ಜಿಲ್ಲೆಗಿಂತ ಉತ್ತರ ಕನ್ನಡದಲ್ಲಿ ಸಾವಿ ಸಂಖ್ಯೆ ಕಡಿಮೆ ಇರುವುದು ಕೊಂಚ ಸಮಾಧಾನದ ಸಂಗತಿಯಾಗಿದೆ.

ಸಕ್ರಿಯ ಪ್ರಕರಣಗಳೆಷ್ಟು??

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 1750 ಪ್ರಕರಣಗಳು ಸಕ್ರಿಯವಾಗಿದ್ದು ಇವರಲ್ಲಿ 1026 ಜನರು ಹೋಮ್ ಐಸೋಲೇಶನ್ ಇದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಕಾರವಾರ 306, ಅಂಕೋಲಾ 111, ಕುಮಟಾ 226, ಹೊನ್ನಾವರ 191, ಭಟ್ಕಳ 125, ಶಿರಸಿ 203, ಸಿದ್ದಾಪುರ 105, ಯಲ್ಲಾಪುರ 198, ಮುಂಡಗೋಡ 64, ಹಳಿಯಾಳ 160, ಜೊಯಿಡಾದಲ್ಲಿ 61 ಪ್ರಕರಣಗಳು ಸಕ್ರಿಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು