News Karnataka Kannada
Thursday, April 18 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ  2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ  2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೊನಾ ಮತ್ತಷ್ಟು ಸದ್ದು ಮಾಡಿದೆ. ಒಂದೇ ದಿನಕ್ಕೆ 120 ಸೋಂಕಿತರ ಪತ್ತೆಯಾಗಿದ್ದು ಈ ಮೂಲಕ ಜಿಲ್ಲೆಯಲ್ಲಿ 2027 ಪ್ರಕರಣಗಳು ದಾಖಲಾಗಿದೆ.

ಈ ಪೈಕಿ ಜಿಲ್ಲೆಯ ಕಾರವಾರ 11, ಅಂಕೋಲಾ 11, ಕುಮಟಾ 18, ಹೊನ್ನಾವರ 9, ಭಟ್ಕಳ 13, ಮುಂಡಗೋಡ 26, ಹಳಿಯಾಳ 28 ಹಾಗೂ ಜೊಯಿಡಾ ತಾಲೂಕಿನಲ್ಲಿ 4 ಪ್ರಕರಣಗಳು ದಾಖಲಾಗಿದೆ.

ಅದರಂತೆ ಜಿಲ್ಲೆಯಲ್ಲಿ ಗುರುವಾರ 51 ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಈ ಪೈಕಿ ಕಾರವಾರ 5, ಅಂಕೋಲಾ 9, ಕುಮಟಾ 4, ಹೊನ್ನಾವರ 1, ಶಿರಸಿ 4, ಸಿದ್ದಾಪುರ 2, ಮುಂಡಗೋಡ 9, ಹಳಿಯಾಳದಲ್ಲಿ 17 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 1268 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದು ಬಿಡುಗಡೆಯಾಗಿದ್ದಾರೆ. ಕೊರೊನಾ ಸೋಂಕಿತರು ಹೆಚ್ಚುತ್ತಿರುವ ಭೀತಿಯ ನಡುವೆ ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದು ಜನರಿಗೆ ಸಮಾಧಾನ ನೀಡಿದೆ.

2 ಸಾವಿರ ಗಡಿ ದಾಟಿದ ಸಂಖ್ಯೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗುರುವಾರ ಎರಡು ಸಾವಿರ ಗಡಿ ದಾಟಿದೆ. ಜಿಲ್ಲೆಯಲ್ಲಿ ಈವರಗೆ ಒಟ್ಟೂ 2027 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಹಳಿಯಾಳದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಕಾರವಾಋ 171, ಅಂಕೋಲಾ 109, ಕುಮಟಾ 236,  ಹೊನ್ನಾವರ 137, ಭಟ್ಕಳ 413, ಶಿರಸಿ 181, ಸಿದ್ದಾಪುರ 32, ಯಲ್ಲಾಪುರ 90, ಮುಂಡಗೋಡ 126, ಹಳಿಯಾಳ ಹಾಗೂ ದಾಂಡೇಲಿ ಸೇರಿ 511, ಜೊಯಿಡಾ ತಾಲೂಕಿನಲ್ಲಿ 21 ಪ್ರಕರಣಗಳು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು