News Karnataka Kannada
Monday, April 22 2024
Cricket
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ 162 ಕೊರೊನಾ ಸೋಂಕು ದೃಢ

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ 162 ಕೊರೊನಾ ಸೋಂಕು ದೃಢ

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸ್ಪೋಟಗೊಂಡಿದ್ದು ಒಂದೇ ದಿನಕ್ಕೆ 162 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೊರೊನಾ ಪ್ರಕರಣಗಳು ದೃಢ ಪಟ್ಟಿದ್ದು ಭಟ್ಕಳದಲ್ಲಿ ಅತೀ ಹೆಚ್ಚು 55 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹಳಿಯಾಳದಲ್ಲಿ 45, ಅಂಕೋಲಾ 16, ಕಾರವಾರ 12, ಶಿರಸಿ 11, ಹೊನ್ನಾವರ 8, ಮುಂಡಗೋಡ 6, ಕುಮಟಾ 5, ಜೋಯಿಡಾ 2, ಸಿದ್ದಾಪುರ ಹಾಗೂ ಯಲ್ಲಾಪುರಗಳಲ್ಲಿ ತಲಾ ಒಂದು ಪ್ರಕರಣ ದೃಢ ಪಟ್ಟಿದೆ.

 

ಇವರಲ್ಲಿ 65 ಮಂದಿಯಲ್ಲಿ ಈಗಾಗಲೇ ಕೋವಿಡ್ ದೃಢ ಪಟ್ಟಿರುವ ಸೋಂಕಿತರ ಸಂಪರ್ಕದಿಂದದಾಗಿ ಕೊರೊನಾ ದೃಢ ಪಟ್ಟಿದೆ. ಇನ್ನುಳಿದಂತೆ ಪ್ರಯಾಣದ ಇತಿಹಾಸವಿರುವ 19 ಮಂದಿಯಲ್ಲಿ ಸೋಂಕು ಪತ್ತೆಯಾದರೆ 18 ಐಎಲ್‌ಐ ಪ್ರಕರಣಗಳು ದೃಢಪಟ್ಟಿದೆ. ಇನ್ನುಳಿದ 60 ಮಂದಿಯ ಸೋಂಕಿತರ ಸಂಪರ್ಕ ಪತ್ತೆಯಾಗಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

 

88 ಸೋಂಕಿತರು ಗುಣಮುಖರಾಗಿ ಬಿಡುಗಡೆ:ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟೂ 88 ಕೋವಿಡ್ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 3, ಕುಮಟಾ 5, ಹೊನ್ನಾವರ 1, ಭಟ್ಕಳ 33, ಮುಂಡಗೋಡ 13 ಹಾಗೂ ಹಳಿಯಾಳದಲ್ಲಿ 33 ಮಂದಿ ಬಿಡುಗಡೆಯಾಗಿದ್ದಾರೆ.

 

808 ಸಕ್ರಿಯ ಪ್ರಕರಣಗಳು:ದೃಢಪಟ್ಟ 162 ಕೋವಿಡ್-19 ಪ್ರಕರಣಗಳಿಂದಾಗಿ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 1668ಕ್ಕೆ ಏರಿಕೆಯಾಗಿದ್ದು ಇವರಲ್ಲಿ 846 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನು 744 ಮಂದಿ ವಿವಿಧ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 64 ಸೋಂಕಿತರು ಹೋಂ ಐಸೋಲೇಶನ್‌ನಲ್ಲಿದ್ದಾರೆ. ಇನ್ನು ಇದುವರೆಗೆ ಜಿಲ್ಲೆಯಲ್ಲಿ 14 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು