News Karnataka Kannada
Thursday, April 25 2024
ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಸೋಂಕಿತರ ಮೃತ್ಯು

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಸೋಂಕಿತರ ಮೃತ್ಯು

ಕಾರವಾರ: ಜಿಲ್ಲೆಯ ವಿವಿಧ ಕೊರೋನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ ಮಂಗಳವಾರ 455 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಏಳು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 6491 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಅಂಕೋಲಾ 15,ಕುಮಟಾ 45, ಹೊನ್ನಾವರ 47, ಭಟ್ಕಳ 45, ಶಿರಸಿ 213,ಸಿದ್ದಾಪುರ 21,ಯಲ್ಲಾಪುರ 51, ಮುಂಡಗೋಡ 16, ಹಳಿಯಾಳ 2  ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಏಳು ಸಾವು

 ಕೊರೊನಾ ಪ್ರಕರಣಕ್ಕೆ ಸಂಬಂಧಿಸಿಂತೆ ಜಿಲ್ಲೆಯಲ್ಲಿ 7 ಜನ ಮೃತಪಟ್ಟಿದ್ದಾರೆ. ಇದರಿಂದ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ಗಳಲ್ಲಿ ಮೃತಪಟ್ಟವರಲ್ಲಿ ಕಾರವಾರ 14, ಅಂಕೋಲಾ 8,ಕುಮಟಾ 8, ಹೊನ್ನಾವರ 15, ಭಟ್ಕಳ 17, ಶಿರಸಿ 11,ಸಿದ್ಧಾಪುರ 2, ಯಲ್ಲಾಪುರ 4, ಮುಂಡಗೋಡ 6, ಹಳಿಯಾಳದಲ್ಲಿ 24 ಹಾಗೂ ಜೊಯಿಡಾದಲ್ಲಿ ಓರ್ವರು ಈವರೆಗೆ ಮೃತಪಟ್ಟಿದ್ದಾರೆ.

158 ಹೊಸ ಸೋಂಕಿತರು ಪತ್ತೆ: ಜಿಲ್ಲೆಯಲ್ಲಿ ಒಟ್ಟು 158 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 8555 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಮಂಗಳವಾರ ಪತ್ತೆಯಾದ ಕೊರೊನಾ ಸೋಂಕಿತರ ಪೈಕಿ ಮುಂಡಗೋಡದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ.  ಕಾರವಾರ 45, ಅಂಕೋಲಾ 10, ಕುಮಟಾ 15, ಶಿರಸಿ 7,ಯಲ್ಲಾಪುರ 6,ಮುಂಡಗೋಡ 59, ಹಳಿಯಾಳ 13 ಹಾಗೂ ಜೊಯಿಡಾದಲ್ಲಿ 3 ಪ್ರಕರಣಗಳು ಪತ್ತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು