News Karnataka Kannada
Thursday, April 18 2024
Cricket
ಕರ್ನಾಟಕ

ಉತ್ತರ ಕನ್ನಡದಲ್ಲಿ 184 ಕೊರೋನಾ ಪ್ರಕರಣ ಪತ್ತೆ: ಎರಡು ಸಾವು

Photo Credit :

ಉತ್ತರ ಕನ್ನಡದಲ್ಲಿ 184 ಕೊರೋನಾ ಪ್ರಕರಣ ಪತ್ತೆ: ಎರಡು ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 184 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಈವರೆಗೆ 7360 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಮಂಗಳವಾರ ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 41, ಕುಮಟಾ 6, ಹೊನ್ನಾವರ 16, ಭಟ್ಕಳ 16,  ಶಿರಸಿ 49, ಸಿದ್ದಾಪುರ 26, ಯಲ್ಲಾಪುರ 17, ಮುಂಡಗೋಡ 10, ಹಳಿಯಾಳ 2, ಜೊಯಿಡಾದಲ್ಲಿ 1 ಪ್ರಕರಣ ಪತ್ತೆಯಾಗಿದೆ.  ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಜನರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.

170 ಜನ ಗುಣಮುಖ

ಜಿಲ್ಲೆಯ ವಿವಿಧ ತಾಲೂಕಿನ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತರ ಪೈಕಿ ಮಂಗಳವಾರ 170 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ  5169 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 2, ಅಂಕೋಲಾ 11, ಕುಮಟಾ 37, ಹೊನ್ನಾವರ 3, ಶಿರಸಿ 36, ಶಿರಸಿ 1. ಸಿದ್ದಾಪುರ 47, ಮುಂಡಗೋಡ 9, ಹಳಿಯಾಳ 19 ಹಾಗೂ ಜೊಯಿಡಾದಲ್ಲಿ 5 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಎರಡು ಸಾವು

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳವಾರ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 85ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಪೈಕಿ ಅಂಕೋಲಾ ಹಾಗೂ ಹೊನ್ನಾವರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.  ಅದರಂತೆ ಜಿಲ್ಲೆಯ ಕಾರವಾರದಲ್ಲಿ 9, ಅಂಕೋಲಾ 7, ಕುಮಟಾ 4, ಹೊನ್ನಾವರ 10, ಭಟ್ಕಳ 14, ಶಿರಸಿ 10, ಸಿದ್ದಾಪುರ 1, ಯಲ್ಲಾಪುರ 2, ಮುಂಡಗೋಡ 5, ಹಳಿಯಾಳ 22, ಜೊಯಿಡಾ 1  ಜನರು ಈವರೆಗೆ ಮೃತಪಟ್ಟಿದ್ದಾರೆ.  ಕೊರೊನಾದಿಂದ  ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು