News Karnataka Kannada
Friday, April 19 2024
Cricket
ಕರ್ನಾಟಕ

ಉತ್ತರ ಕನ್ನಡದಲ್ಲಿ 134 ಕೊರೊನಾ ಪ್ರಕರಣ ದೃಢ: ಎರಡು ಸಾವು

Photo Credit :

ಉತ್ತರ ಕನ್ನಡದಲ್ಲಿ 134 ಕೊರೊನಾ ಪ್ರಕರಣ ದೃಢ: ಎರಡು ಸಾವು

ಕಾರವಾರ: ಜಿಲ್ಲೆಯಲ್ಲಿ ರವಿವಾರ 134 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಈವರೆಗೆ 6938 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 7 ಸಾವಿರ ಗಡಿಗೆ ತಲುಪಿದೆ. ರವಿವಾರ ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 13, ಅಂಕೋಲಾ 8, ಹೊನ್ನಾವರ 1, ಭಟ್ಕಳ 5, ಶಿರಸಿ 12, ಸಿದ್ದಾಪುರ 27, ಯಲ್ಲಾಪುರ 37, ಹಳಿಯಾಳ 21, ಜೊಯಿಡಾ 10 ಪ್ರಕರಣಗಳು ಪತ್ತೆಯಾಗಿದೆ.

35 ಜನ ಗುಣಮುಖ: ಜಿಲ್ಲೆಯ ವಿವಿಧ ತಾಲೂಕಿನ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತರ ಪೈಕಿ ರವಿವಾರ 35 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 4900 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 1, ಅಂಕೋಲಾ 5, ಹೊನ್ನಾವರ 11, ಶಿರಸಿ 6, ಹಳಿಯಾಳ 9 ಹಾಗೂ ಜೊಯಿಡಾದಲ್ಲಿ 3 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಹಳಿಯಾಳದಲ್ಲಿ ಎರಡು ಸಾವು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ರವಿವಾರ ಹಳಿಯಾಳ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ 82 ಜನರು ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟಿದ್ದಾರೆ.

ಅದರಂತೆ ಜಿಲ್ಲೆಯ ಕಾರವಾರದಲ್ಲಿ 9, ಅಂಕೋಲಾ 6, ಕುಮಟಾ 4, ಹೊನ್ನಾವರ 9, ಭಟ್ಕಳ 14, ಶಿರಸಿ 9, ಯಲ್ಲಾಪುರ 2, ಮುಂಡಗೋಡ 4, ಹಳಿಯಾಳ 22, ಜೊಯಿಡಾ 1 ಜನರು ಈವರೆಗೆ ಮೃತಪಟ್ಟಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು