News Karnataka Kannada
Monday, April 22 2024
Cricket
ಕರ್ನಾಟಕ

ಉತ್ತರ ಕನ್ನಡದಲ್ಲಿ 102 ಕೊರೊನಾ ದೃಢ: ಮೂವರು ಸಾವು

Photo Credit :

ಉತ್ತರ ಕನ್ನಡದಲ್ಲಿ 102 ಕೊರೊನಾ ದೃಢ: ಮೂವರು ಸಾವು

ಕಾರವಾರ: ಜಿಲ್ಲೆಯ ಶನಿವಾರ 102 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 11082 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 9048 ಜನ ಗುಣಮುಖರಾಗಿದ್ದಾರೆ.

ಸಕ್ರಿಯವಾಗಿರುವ 1902 ಪ್ರಕರಣಗಳಲ್ಲಿ 850 ಜನ ಅವರವರ ಮನೆಯಲ್ಲಿ ಹಾಗೂ 1052 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಪತ್ತೆಯಾದ ಕೊರೊನಾ ಸೋಂಕಿತರ ಪೈಕಿ ಕಾರವಾರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಕಾರವಾರ 29, ಅಂಕೋಲಾ 7, ಕುಮಟಾ 9,ಹೊನ್ನಾವರ 15,ಭಟ್ಕಳ 6, ಶಿರಸಿ 11,ಸಿದ್ದಾಪುರ 15, ಯಲ್ಲಾಪುರ 10 ಪ್ರಕರಣಗಳು ಪತ್ತೆಯಾಗಿದೆ.

ಜಿಲ್ಲೆಯಲ್ಲಿ ಇಂದು ಒಟ್ಟು 102 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 11082 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

251 ಜನ ಗುಣಮುಖ: ಜಿಲ್ಲೆಯ ವಿವಿಧ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ 251 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 9048 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 56, ಅಂಕೋಲಾ 2,ಕುಮಟಾ 27, ಹೊನ್ನಾವರ 28,ಭಟ್ಕಳ 12, ಶಿರಸಿ 45,ಸಿದ್ದಾಪುರ 11,ಯಲ್ಲಾಪುರ 5,ಮುಂಡಗೋಡ 52, ಹಳಿಯಾಳ 5 ಹಾಗೂ ಜೊಯಿಡಾದಲ್ಲಿ 8 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಜಿಲ್ಲೆಯ ಜನರಿಗೆ ಕೊಂಚ ಸಮಾಧಾನ ತಂದಿದೆ.

ಮತ್ತೇ ಮೂವರ ಮೃತ್ಯು: ಕೊರೊನಾ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ಜಿಲ್ಲೆಯಲ್ಲಿ 3 ಜನ ಮೃತಪಟ್ಟಿದ್ದಾರೆ. ಇದರಿಂದ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 132 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ಗಳಲ್ಲಿ ಮೃತಪಟ್ಟವರಲ್ಲಿ ಕಾರವಾರ 16, ಅಂಕೋಲಾ 8,ಕುಮಟಾ 10, ಹೊನ್ನಾವರ 17, ಭಟ್ಕಳ 18, ಶಿರಸಿ 16,ಸಿದ್ಧಾಪುರ 4, ಯಲ್ಲಾಪುರ 4, ಮುಂಡಗೋಡ 9, ಹಳಿಯಾಳದಲ್ಲಿ 29 ಹಾಗೂ ಜೊಯಿಡಾದಲ್ಲಿ ಓರ್ವರು ಈವರೆಗೆ ಮೃತಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು