News Karnataka Kannada
Thursday, April 18 2024
Cricket
ಕರ್ನಾಟಕ

ಉತ್ತರ ಕನ್ನಡದಲ್ಲಿ ಗಾಳಿಯ ಹೊಡೆತಕ್ಕೆ ದಡಕ್ಕೆ ಬಂದು ಬಿದ್ದ ಮೀನುಗಾರಿಕಾ ಬೋಟು

Photo Credit :

ಉತ್ತರ ಕನ್ನಡದಲ್ಲಿ ಗಾಳಿಯ ಹೊಡೆತಕ್ಕೆ ದಡಕ್ಕೆ ಬಂದು ಬಿದ್ದ ಮೀನುಗಾರಿಕಾ ಬೋಟು

ಕಾರವಾರ: ಇಲ್ಲಿನ ಸಮುದ್ರದ ಆರ್ಭಟಕ್ಕೆ ಕಾರವಾರ ಕಡಲ‌ ತೀರದಿಂದ ದೂರದಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟು ಆ್ಯಂಕರ್ ತುಂಡಾಗಿದ ಪರಿಣಾಮ ದಡಕ್ಕೆ ತೆಲಿ ಬಂದಿ ಘಟನೆ ಬೆಳಗ್ಗಿನ ಜಾವ ನಡೆದಿದೆ.

ಸಮುದ್ರದಲ್ಲಿ ತುಫಾನ್ ವಾತಾವರಣ ನಿರ್ಮಾಣವಾಗಿದೆ ಇದರಿಂದ ಕೇರಳ, ತಮಿಳುನಾಡು, ಗೋವಾ ರಾಜ್ಯ ಸೇರಿದಂತೆಮಂಗಳೂರು, ಮಲ್ಪೆ ಬೋಟುಗಳು ಕಾರವಾರದ ಬೈತಖೋಲ್ ಬಂದರಿನಲ್ಲಿ ಲಂಗರು ಹಾಕಿವೆ. ಹೆಚ್ಚಿನ ಬೋಟುಗಳಿಗೆ ಮೀನುಗಾರಿಕಾ ಜಟ್ಟಿಯೊಳಗೆ ಸ್ಥಳಾವಕಾಶದ ಕೊರತೆಯಿಂದ ಕಾರವಾರ ಕಡಲ ತೀರದಿಂದ ಸುಮಾರು 200 ಮೀಟರ್ ಅಂತರದಲ್ಲಿ ಲಂಗರು ಹಾಕಿದ್ದವು.

ಲಂಗರು ಹಾಕಿದ್ದ ಮಲ್ಪೆ ಭಾಗದ ಮಜ್ದೂರ್ ಹಾಗೂ ಪ್ರಾವಿನೆನ್ಸ್ ಹೆಸರಿನ ಬೋಟುಗಳು ಗಾಳಿಯ‌ ರಭಸಕ್ಕೆ‌ ದಡಕ್ಕೆ ಬಂದು ಅಪ್ಪಳಿಸಿದೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿ, ಪ್ರಾಣಹಾನಿಯಾಗಿಲ್ಲ. ಆದರೆ ಈ ಮೀನುಗಾರಿಕಾ‌ ಬೋಟು ದಡಕ್ಕೆ ತೆಲಿ ಬಂದಿದ್ದರಿಂದ ಮತ್ತೇ ಸಮುದ್ರಕ್ಕೆ ಸೇರಿಸುವುದು ಮೀನುಗಾರರಿಗೆ ಸದ್ಯದ ಮಟ್ಟಿಗೆ ಕಷ್ಟಸಾಧ್ಯವಾಗಿದೆ. ತುಫಾನ್ ವಾತಾವರಣ ಇದ್ದು ಸಮುದ್ರದ ಆರ್ಭಟವೂ ಹೆಚ್ಚಿದೆ. ಪರಿಸ್ಥಿತಿ ತಿಳಿಗೊಂಡ ಬಳಿಕ, ಬೋಟ್ ಸಮುದ್ರಕ್ಕೆ ಒಯ್ಯುವ ಪ್ರಯತ್ನ ನಡೆಯಲಿದೆ. ಅದರಂತೆ ನಾಡದೋಣಿ ಸಹ ದಡಕ್ಕೆ ಬಂದು ಬಿದ್ದಿದ್ದು ಹಾನಿ ಸಂಭವಿಸಿಲ್ಲ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು