News Karnataka Kannada
Sunday, April 21 2024
Cricket
ಕರ್ನಾಟಕ

ಉತ್ತರ ಕನ್ನಡದಲ್ಲಿ ಒಂದೇ ದಿನ 208 ಕೊರೊನಾ ಸೋಂಕಿತರು ಪತ್ತೆ

Photo Credit :

ಉತ್ತರ ಕನ್ನಡದಲ್ಲಿ ಒಂದೇ ದಿನ 208 ಕೊರೊನಾ ಸೋಂಕಿತರು ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ 208 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 10980 ಕ್ಕೆ ಏರಿಕೆಯಾಗಿದೆ . ಇದರಲ್ಲಿ 8797 ಜನ ಗುಣಮುಖರಾಗಿದ್ದಾರೆ. ಸಕ್ರಿಯವಾಗಿರುವ 2054 ಪ್ರಕರಣಗಳಲ್ಲಿ 895 ಜನ ಅವರವರ ಮನೆಯಲ್ಲಿ ಹಾಗೂ 1159 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ .

ಪತ್ತೆಯಾದ ಕೊರೊನಾ ಸೋಂಕಿತರ ಪೈಕಿ ಕುಮಟಾದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ಕಾರವಾರ 38, ಅಂಕೋಲಾ 12, ಕುಮಟಾ 45,ಹೊನ್ನಾವರ 12,ಭಟ್ಕಳ 6, ಶಿರಸಿ 39,ಸಿದ್ದಾಪುರ 8, ಯಲ್ಲಾಪುರ 22,ಮುಂಡಗೋಡ 10, ಹಳಿಯಾಳ 16 ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 208 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 10980 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಜಿಲ್ಲೆಯ ವಿವಿಧ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸೋಂಕಿತರ ಪೈಕಿ ಇಂದು 300 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ 8797 ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 76, ಅಂಕೋಲಾ 19,ಕುಮಟಾ 15, ಹೊನ್ನಾವರ 38,ಭಟ್ಕಳ 23, ಶಿರಸಿ 28,ಸಿದ್ದಾಪುರ 21,ಯಲ್ಲಾಪುರ 7,ಮುಂಡಗೋಡ 61, ಹಳಿಯಾಳ 8 ಹಾಗೂ ಜೊಯಿಡಾದಲ್ಲಿ 4 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮೂವರ ಸಾವು: ಕೊರೊನಾ ಪ್ರಕರಣಕ್ಕೆ ಸಂಬಂಧಿಸಿಂತೆ ಶುಕ್ರವಾರ ಜಿಲ್ಲೆಯಲ್ಲಿ 3 ಜನ ಮೃತಪಟ್ಟಿದ್ದಾರೆ. ಇದರಿಂದ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 129 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ವಿವಿಧ ಕೋವಿಡ್ ವಾರ್ಡ್ ಗಳಲ್ಲಿ ಮೃತಪಟ್ಟವರಲ್ಲಿ ಕಾರವಾರ 16, ಅಂಕೋಲಾ 8,ಕುಮಟಾ 10, ಹೊನ್ನಾವರ 16, ಭಟ್ಕಳ 18, ಶಿರಸಿ 16,ಸಿದ್ಧಾಪುರ 4, ಯಲ್ಲಾಪುರ 4, ಮುಂಡಗೋಡ 7, ಹಳಿಯಾಳದಲ್ಲಿ 29 ಹಾಗೂ ಜೊಯಿಡಾದಲ್ಲಿ ಓರ್ವರು ಈವರೆಗೆ ಮೃತಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು