News Karnataka Kannada
Friday, April 12 2024
Cricket
ಕರ್ನಾಟಕ

ಉಗುರಿಗಾಗಿ ಹುಲಿ ಹತ್ಯೆ: ಕೊಡಗಿನಲ್ಲಿ ನಾಲ್ವರ ಬಂಧನ

Photo Credit :

ಉಗುರಿಗಾಗಿ ಹುಲಿ ಹತ್ಯೆ: ಕೊಡಗಿನಲ್ಲಿ ನಾಲ್ವರ ಬಂಧನ

ಮಡಿಕೇರಿ: ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಹುಲಿ ಎಂದು ಸರ್ಕಾರ ಘೋಷಿಸಿದ್ದು ಇವುಗಳ ಸಂರಕ್ಷಣೆಗಾಗಿಯೇ ವಾರ್ಷಿಕ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳನ್ನೂ ನಿರ್ಮಿಸಿ ಇವುಗಳ ಸಂತತಿ ವೃದ್ದಿಗಾಗಿ ಹುಲಿ ಯೋಜನೆಯನ್ನೂ ಜಾರಿಗೆ ತಂದಿದೆ. ಅದರೆ ದುಷ್ಕರ್ಮಿಗಳು ಕೇವಲ ಹುಲಿಯ ಉಗುರಿಗಾಗಿ ಅದನ್ನು ಕೊಂದು ಕಾಲುಗಳನ್ನು ಕತ್ತರಿಸಿಕೊಂಡು ಹೋಗಿರುವ ಅಮಾನವೀಯ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ನಡೆದಿದೆ. ಕೊಡಗಿನ ಸುಳುಗೋಡು ಗ್ರಾಮದ ಶಶಿ, ಶರಣು, ಸಂತೋಷ್ ಹಾಗೂ ನೆವಲೆ ಗ್ರಾಮದ ರಂಜು ಅವರುಗಳು ಬೇಟೆಗೆಂದು ತೆರಳಿದ್ದರು ಎನ್ನಲಾಗಿದೆ. ಇವರು ಗುಂಡು ಹೊಡೆದು ಜಿಂಕೆಯನ್ನು ಹತ್ಯೆ ಮಾಡಿ ಹಿಂದಿರುಗುವಾಗ ಕಂಡ ಅಪರೂಪದ ಪ್ರಾಣಿ ಹುಲಿಯನ್ನು ಗುಂಡಿಕ್ಕಿ ಹತ್ಯೆಗೈದು, ಅದರ ಉಗುರಿಗಾಗಿ ಹುಲಿಯ ಕಾಲುಗಳನ್ನು ತುಂಡರಿಸಿದ ಘಟನೆ ಕಲ್ಲಳ್ಳ ವಲಯ ಸಂರಕ್ಷಿತ ಅರಣ್ಯದಲ್ಲಿ ನಡೆದಿದೆ.

 

ಕಲ್ಲಳ್ಳ ಹುಲಿ ಸಂರಕ್ಷಿತ ಅರಣ್ಯಕ್ಕೆ ಜಿಂಕೆ ಬೇಟೆಗೆಂದು ನಾಲ್ವರು ತೆರಳಿದ್ದರು. ಈ ವೇಳೆ ಜಿಂಕೆಯನ್ನು ಬೇಟೆಯಾಡಿ ಬರುತ್ತಿದ್ದ ವೇಳೆ, ಹುಲಿ ಕಣ್ಣೆದುರು ಬಂದಿದೆ. ಈ ವೇಳೆ ಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು ಮೃತಪಟ್ಟ ಹುಲಿಯ ಉಗುರಿಗಾಗಿ ಅದರ ನಾಲ್ಕು ಕಾಲುಗಳನ್ನು ಕತ್ತರಿಸಿ, ತೆಗೆದುಕೊಂಡು ಹೋಗಿದ್ದರು. ಪ್ರಕರಣದ ತನಿಖೆ ಕೈಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು ದುಷ್ಕರ್ಮಿಗಳ ಪತ್ತೆಕಾರ್ಯಕ್ಕೆ ಬಂಡೀಪುರದ ಅರಣ್ಯ ಇಲಾಖೆಯ ಶ್ವಾನದಳದ ಚತುರ ಎಂದು ಕರೆಸಿಕೊಳ್ಳುವ ‘ರಾಣಾ’ನನ್ನು ಕರೆಸಿದ್ದಾರೆ. ಹುಲಿ ಸತ್ತು ಬಿದ್ದ ಸ್ಥಳದಿಂದ ಆರೋಪಿಗಳ ಪತ್ತೆಗೆ ತೆರಳಿದ ‘ರಾಣಾ’ ನೇರವಾಗಿ ಮುಖ್ಯ ಆರೋಪಿ ಸಂತೋಷ್‌ನ ಮನೆಯ ಸುಳಿವು ನೀಡಿದೆ. ಈ ವೇಳೆ ಆತನ ಮನೆಯಲ್ಲಿ ಒಂದೂವರೆ ಕೆಜಿ ಜಿಂಕೆ ಮಾಂಸ ಪತ್ತೆಯಾಗಿದೆ. ಈ ವೇಳೆ ತಲೆಮರೆಸಿಕೊಂಡಿರುವ ರಂಜು, ಶಶಿ, ಶರಣು ಮನೆ ಸುಳಿವನ್ನು ರಾಣಾ ನೀಡಿದೆ.

ಆರೋಪಿತರ ಮನೆಯಲ್ಲಿ ಬಚ್ಚಿಟ್ಟಿದ್ದ ಹುಲಿಯ ಉಗುರುಗಳು ,ಕೃತ್ಯಕ್ಕೆ ಬಳಸಿದ ಬಂದೂಕು ಮತ್ತು ಗುಂಡುಗಳು ಪತ್ತೆಯಾಗಿದೆ. ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ತನಿಖೆ ನಡೆಸುತಿದ್ದಾರೆ. ಸ್ಥಳಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರ, ಟೈಗರ್ ಪ್ರಾಜೆಕ್ಟ್​ನ ಜಗತ್ ರಾಂ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ನಾಗರಹೊಳೆ ನಿರ್ದೇಶಕ ಡಿ.ಮಹೇಶ್ ಕುಮಾರ್ ಭೇಟಿ ನೀಡಿ‌ ಪರಿಶೀಲಿಸಿದ್ದಾರೆ. ಈ ಘಟನೆ ವನ್ಯ ಪ್ರೇಮಿಗಳಿಗೆ ಶಾಕ್‌ ನೀಡಿದ್ದು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು