News Karnataka Kannada
Thursday, April 25 2024
ಕರ್ನಾಟಕ

ಇಂದು ಗಾಂಧಿ ಸ್ಮರಣೆ: ದೇಶದಾದ್ಯಂತ ರಾಷ್ಟ್ರಪಿತಗೆ ನಮನ

Photo Credit :

ಇಂದು ಗಾಂಧಿ ಸ್ಮರಣೆ: ದೇಶದಾದ್ಯಂತ ರಾಷ್ಟ್ರಪಿತಗೆ ನಮನ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಜನ್ಮ ದಿನವಿಂದು; ಅಹಿಂಸೆಯ ಸಾರವನ್ನು ಹೊತ್ತು ಅಂತರರಾಷ್ಟ್ರೀಯ ಅಹಿಂಸಾತ್ಮಕ ದಿನವಾಗಿ ಪ್ರತಿಬಿಂಬಿಸುತ್ತಿದೆ.

ಅಹಿಂಸೆಯನ್ನೇ ತನ್ನ ಹೋರಾಟದ ಅಸ್ತ್ರವನಗನ್ನಾಗಿಸಿ ಶಾಂತಿಯ ಮಾರ್ಗದಲ್ಲಿಯೇ ಹೋರಾಡಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸಾ ಅಯಾಮವನ್ನೇ ನೀಡಿ, ಪ್ರಪಂಚದಾದ್ಯಂತ ಕ್ರಾಂತಿಕಾರಿ ಚಿಂತನೆಯಿಂದ ಶಾಂತಿ ಸಂಗ್ರಾಮದ ಚಿಂತನೆಯತ್ತ ಕರೆದೊಯ್ದ ಮಹಾತ್ಮ ಮೋಹನ್ ದಾಸ್ ಕರಮಚಂದ್ರ ಗಾಂಧಿ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರ್ಬಂದರ್‌ನಲ್ಲಿ ಜನಿಸಿದರು. ಈ ವರ್ಷ ಗಾಂಧಿಯವರ 151ನೇ ಜನ್ಮ ದಿನಾಚರಣೆಯಾಗಿದೆ.

ಈ ದಿನ ಜನರು ಕಾಲೇಜುಗಳು, ಸ್ಥಳೀಯ ಸರ್ಕಾರಿ ಸಂಸ್ಥೆಗಳು ಮತ್ತು ಸಾಮಾಜಿಕ-ರಾಜಕೀಯ ಸಂಸ್ಥೆಗಳಲ್ಲಿ ನಡೆಯುವ ಪ್ರಾರ್ಥನೆ ಸೇವೆಗಳು, ಸ್ಮರಣಾರ್ಥ ಸಮಾರಂಭಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾರೆ. ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಹೂಮಾಲೆ ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. ಅವರ ನೆಚ್ಚಿನ ಹಾಡು ರಘುಪತಿ ರಾಘವವನ್ನು ಕೆಲವು ಸಭೆಗಳಲ್ಲಿ ಹಾಡಲಾಗುತ್ತದೆ. ಅವರ ಜನ್ಮದಿನವನ್ನು ವಿಶ್ವದ ಇತರ ಭಾಗಗಳಲ್ಲಿಯೂ ಆಚರಿಸ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಅದರೊಂದಿಗೆ ಗಾಂಧಿ ತತ್ವಗಳನ್ನು ಸಾರುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸಲಾಗುತ್ತದೆ.

ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಗಾಂಧಿಯವರ ಕೊಡುಗೆಗಳನ್ನು ಮತ್ತು ಅವರ ಅಹಿಂಸಾತ್ಮಕ ಜೀವನ ವಿಧಾನವನ್ನು ಜನರು ಗೌರವಿಸುತ್ತಾರೆ. ಅವರು 1930ರಲ್ಲಿ ದಾಂಡಿ ಸಾಲ್ಟ್ ಮಾರ್ಚ್ ಅನ್ನು ಮುನ್ನಡೆಸಿದರು. 1942 ರಲ್ಲಿ ಅವರು ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು. ಅಸ್ಪೃಶ್ಯತೆಯ ಹಳೆಯ-ಅಭ್ಯಾಸವನ್ನು ರದ್ದುಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಇಂತಹಾ ಮಾಹಾನ್ ವ್ಯಕ್ತಿ ಜನಿಸಿದ ದಿನದಂದು ಪ್ರತೀ ವರ್ಷ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಿ ಸಾಮಾನ್ಯವಾಗಿ ನವದೆಹಲಿಯ ಮಹಾತ್ಮ ಗಾಂಧಿಯವರ ಸಮಾಧಿ ರಾಜ್‌ಘಾಟ್‌ನಲ್ಲಿ ಗೌರವ ಸಲ್ಲಿಸುತ್ತಾರೆ.

ಜೂನ್ 15, 2007 ರಂದು, ಯುಎನ್ ಜನರಲ್ ಅಸೆಂಬ್ಲಿ ಗಾಂಧಿಜಿಯವರ ಜನ್ಮದಿನವಾದ ಅಕ್ಟೋಬರ್ 2 ಅನ್ನು ಅಂತರರಾಷ್ಟ್ರೀಯ ಅಹಿಂಸಾತ್ಮಕ ದಿನವೆಂದು ಘೋಷಿಸಿದ್ದರು. “ಅಹಿಂಸೆಯ ತತ್ವದ ಸಾರ್ವತ್ರಿಕ ಪ್ರಸ್ತುತತೆ” ಮತ್ತು “ಶಾಂತಿ, ಸಹನೆ, ತಿಳುವಳಿಕೆ ಮತ್ತು ಅಹಿಂಸೆಯ ಸಂಸ್ಕೃತಿಯನ್ನು ಭದ್ರಪಡಿಸುವ ಬಯಕೆಯನ್ನು” ಪುನರುಚ್ಚರಿಸುವ ಆಶಯ ಈ ದಿನದ್ದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು