News Karnataka Kannada
Thursday, April 18 2024
Cricket
ಕರ್ನಾಟಕ

ಆರ್ಥಿಕ ಪರಿಸ್ಥಿತಿ ಕುಸಿತ: ಮೈಸೂರಿನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ

Photo Credit :

ಆರ್ಥಿಕ ಪರಿಸ್ಥಿತಿ ಕುಸಿತ: ಮೈಸೂರಿನಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ

ಮೈಸೂರು: ಕೋವಿಡ್ ಸೋಂಕಿನ ಪ್ರಕರಣಗಳ ನಡುವೆಯೇ ಆರ್ಥಿಕ ಪರಿಸ್ಥಿತಿ ಕುಸಿತವಾಗುತಿದ್ದು ದುಷ್ಕರ್ಮಿಗಳು ಈಗ ಜನರನ್ನು ದೋಚಲು ಮುಂದಾಗಿದ್ದಾರೆ. ನಗರದಲ್ಲಿ ರಾತ್ರಿ ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ಬೆದರಿಸಿ ಅವರ ಬಳಿ ಇದ್ದ ಅಮೂಲ್ಯ ಸ್ವತ್ತುಗಳನ್ನು ಅಪಹರಿಸುವ, ಅಂಗಡಿ ಮುಂಗಟ್ಟುಗಳನ್ನು ಕಳ್ಳತನ ಮಾಡುವ ಒಬ್ಬಂಟಿ ಮಹಿಳೆಯರ ಸರ ಎಗರಿಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಭಾನುವಾರ ಖಾಸಗಿ ಕಂಪನಿಯ ನೌಕರ, ಎನ್ ಆರ್.ಮೊಹಲ್ಲಾ ನಿವಾಸಿ ಪುನೀತ್ (26)ಎಂಬಾತ ತನ್ನ ದ್ವಿಚಕ್ರವಾಹನದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಎನ್ ಆರ್ ಮೊಹಲ್ಲಾ ಶಿವಾಜಿ ರಸ್ತೆಯಲ್ಲಿ ನಾಲ್ವರಿದ್ದ ಗುಂಪೂಂದು ತಡೆದು ನಿಲ್ಲಿಸಿದ್ದು ಯುವಕನ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನು ಎಗರಿಸಿದೆ. ಯುವಕ ಕೊಸರಿಕೊಂಡು ಕೂಗಲು ಯತ್ನಿಸಿದಾಗ ಆತನಿಗೆ ಚಾಕು ತೋರಿಸಿ ಬೆದರಿಸಿದ ಗುಂಪು ತಲೆಯ ಮೇಲೆ ಗಾಯ ಮಾಡಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದೆ. ಈ ಕುರಿತು ಯುವಕ ಎನ್,ಆರ್.ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸಪೆಕ್ಟರ್ ಶೇಖರ್ ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಭಯ ಕಳ್ಳರಿಗೆ ಇಲ್ಲವಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಯಾಕೆಂದರೆ ನಗರದ ಹೃದಯಭಾಗದಲ್ಲಿನ ಮಳೆಗಗಳಲ್ಲಿಯೂ ಸರಣಿ ಕಳ್ಳತನ ನಡೆಯುತ್ತಿವೆ. ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೂ ದುಷ್ಕರ್ಮಿಗಳು ಅವರ ಕುತ್ಚತಿಗೆಯಲ್ಲಿದ್ದ ಚಿನ್ನದ ಸರಗಳನ್ನು ಅಪಹರಿಸುವ ಪ್ರಕರಣಗಳು ಹೆಚ್ಚುತ್ತಿವೆ.

ನಗರದಲ್ಲಿ ಈ ರೀತಿ ಕೃತ್ಯಗಳನ್ನು ಎಸಗುವವರ ಗುಂಪೊಂದು ಸಕ್ರಿಯವಾಗಿರುವಂತೆ ಕಂಡು ಬರುತ್ತಿದ್ದು, ಕಳ್ಳರಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು