News Karnataka Kannada
Tuesday, April 23 2024
Cricket
ಕರ್ನಾಟಕ

ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್‌ ; ಐವರು ಮಹಿಳೆಯರ ಬಂಧನ

Photo Credit :

ಆರ್ಗ್ಯಾನಿಕ್​​ ಬ್ಯೂಟಿ' ಹೆಸರಿನಲ್ಲಿ  ಸೆಕ್ಸ್‌ ;  ಐವರು ಮಹಿಳೆಯರ ಬಂಧನ

ಗ್ವಾಲಿಯರ್​(ಮಧ್ಯಪ್ರದೇಶ): ಗ್ವಾಲಿಯರ್​ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೆಕ್ಸ್​​ ರಾಕೆಟ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಕ್ರೈಂ ಬ್ರ್ಯಾಂಚ್​ ಪೊಲೀಸರು ಮಾಲೀಕ ಸೇರಿದಂತೆ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಐವರು ಮಹಿಳೆಯರ ಬಂಧನ’ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಐವರು ಮಹಿಳೆಯರು ಹಾಗೂ ದಂಧೆ ನಡೆಸುತ್ತಿದ್ದ ಮಾಲೀಕನ ಬಂಧನ ಮಾಡಿದ್ದಾರೆ.ಕಳೆದ ಕೆಲ ತಿಂಗಳಿಂದ ಗೋವಿಂದ್​ಪುರ ಇಲಾಖೆಯಲ್ಲಿ ಆರ್ಗ್ಯಾನಿಕ್​ ಬ್ಯೂಟಿ ಎಂಬ ಹೆಸರಿನ ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸುತ್ತಿದ್ದರು. ದಾಳಿ ನಡೆಸಿರುವ ವೇಳೆ 15 ಸಾವಿರ ರೂ. ನಗದು ಹಣ ಸಿಕ್ಕಿದೆ ಎಂದು ಎಎಸ್​​ಪಿ ಹಿತಿಕಾ ವಾಸ್ಲೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಏಪ್ರಿಲ್​ ತಿಂಗಳಲ್ಲಿ ಗ್ವಾಲಿಯರ್​ನ ವಿಶ್ವವಿದ್ಯಾಲಯ ಪ್ರದೇಶದಲ್ಲಿ ದಾಳಿ ನಡೆಸಿ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಂಧಿತ ಹುಡುಗಿಯರು ದೆಹಲಿ ಹಾಗೂ ಕೋಲ್ಕತ್ತಾ ಮೂಲದವರು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು