News Karnataka Kannada
Friday, April 12 2024
Cricket
ಕರ್ನಾಟಕ

ಆಮೆ ಬೇಟೆಯಾಡಿದ ಆರು ಮಂದಿ ಬಂಧನ

Photo Credit :

ಆಮೆ ಬೇಟೆಯಾಡಿದ ಆರು ಮಂದಿ ಬಂಧನ

ಚಾಮರಾಜನಗರ: ಕೊರೋನಾ ಲಾಕ್ ಡೌನ್ ಬಳಿಕ ಜಿಲ್ಲೆಯಲ್ಲಿ ಬೇಟೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಿಕ್ಕ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ಮಾಂಸ ಮಾಡಿ ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಪ್ರಾಣಿಗಳನ್ನು ಬೇಟೆಯಾಡುವ ಪ್ರಕರಣ ನಡೆದಿದ್ದು, ಈ ಸಂಬಂಧ ಕೆಲವರು ಸಿಕ್ಕಿ ಬಿದ್ದಿದ್ದಾರೆ. ಈ ನಡುವೆ ಆಮೆಯೊಂದನ್ನು ಬೇಟೆಯಾಡಿ ಮಾಂಸ ಮಾಡಿ ತಿಂದ ಪ್ರಕರಣ ಬೆಳಕಿಗೆ ಬಂದಿದ್ದು  ಈ ಸಂಬಂಧ ಆರು ಮಂದಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸಮೀಪದ ಮಾಕ್ಕಳ್ಳಿ ಕಾಲೋನಿಯ ಸುರೇಶ್, ಶಿವಣ್ಣ, ಗಣೇಶ್, ಗಿರೀಶ್, ಕುಮಾರ್, ಶ್ರೀನಿವಾಸ್ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಈ  ಬಂಧಿತ ಆರೋಪಿಗಳು ಊರೂರು ತಿರುಗಿ ಶಾಸ್ತ್ರ ಹೇಳಿ ಬದುಕುತ್ತಿದ್ದವರಾಗಿದ್ದು, ಕೊಳ್ಳೇಗಾಲ ಪಟ್ಟಣ ಸಮೀಪದ ಬಸ್ತಿಪುರ ಗ್ರಾಮದ ಕಬಿನಿ ನಾಲೆಯ ಸಮೀಪದಲ್ಲಿ ಆಮೆಯನ್ನು ಕೊಂದು ಅದರ ಮಾಂಸದಿಂದ ಅಡುಗೆ ತಯಾರಿಸುತ್ತಿದ್ದರು. ಇದೇ ವೇಳೆ ರೈತ ಮುಖಂಡ ಮಹದೇವ ಎಂಬುವರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಇವರನ್ನು ವಿಚಾರಿಸಿರುವ ವೇಳೆ ಆಮೆ ಕೊಂದು ಅಡುಗೆ ತಯಾರಿಸುತ್ತಿರುವುದು ಖಚಿತವಾಗಿದೆ. ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆರ್.ಎಫ್.ಓ ಪ್ರವೀಣ್ ರಾಮಪ್ಪ ಛಲವಾದಿ ಅರಣ್ಯ ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಮೆ ಚಿಪ್ಪು, ಮಾಂಸ ಹಾಗೂ ಮೂಳೆಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು