News Karnataka Kannada
Saturday, April 13 2024
Cricket
ಕರ್ನಾಟಕ

ಅ.17ರಂದು ಕಾವೇರಿ ತೀರ್ಥೋದ್ಭವ: ಭಕ್ತರಿಗೆ ತೀರ್ಥ ಪ್ರೋಕ್ಷಣೆಯಷ್ಟೇ ಆಗಲಿದೆ

Photo Credit :

ಅ.17ರಂದು ಕಾವೇರಿ ತೀರ್ಥೋದ್ಭವ: ಭಕ್ತರಿಗೆ ತೀರ್ಥ ಪ್ರೋಕ್ಷಣೆಯಷ್ಟೇ ಆಗಲಿದೆ

ಮಡಿಕೇರಿ: ಕಾವೇರಿ ನದಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಅ.17 ರಂದು ಬೆಳಗ್ಗೆ 7.03 ಗಂಟೆಗೆ ಕಾವೇರಿ ತೀರ್ಥೋದ್ಭವವಾಗುತ್ತಿದೆ.

ಆದರೆ ಈ ಕ್ಷಣವನ್ನು ವೀಕ್ಷಿಸಲು ಆಗಮಿಸುವ ಹೊರ ಜಿಲ್ಲೆ ಹಾಗೂ ರಾಜ್ಯದ ಭಕ್ತರು ಕೋವಿಡ್ ಪರೀಕ್ಷೆಯ ದೃಢೀಕರಣ ಪತ್ರವನ್ನು ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಕಾವೇರಿ ತುಲಾಸಂಕ್ರಮಣದ ಪೂರ್ವಭಾವಿ ಸಭೆ ನಡೆಸಿದ ಅವರು ಆರೋಗ್ಯ ಸುರಕ್ಷಾ ಕ್ರಮಗಳೊಂದಿಗೆ ತಲಕಾವೇರಿಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕಾವೇರಿ ತೀರ್ಥೋದ್ಭವದ ಸಂದರ್ಭ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿ, ಆತಂಕಗಳಿರುವುದಿಲ್ಲ, ಆದರೆ ಕೋವಿಡ್ ಮುಂಜಾಗೃತಾ ಕ್ರಮವಾಗಿ ಹೊರಗಿನಿಂದ ಬರುವ ಭಕ್ತರ ಮೇಲೆ ನಿಗಾ ವಹಿಸಲಾಗುವುದು ಎಂದರು.

ಕೊಡಗಿನ ಭಕ್ತರು ಹೊರತು ಪಡಿಸಿದಂತೆ ಇತರರು ಕೋವಿಡ್ ಪರೀಕ್ಷೆಯ ಪತ್ರವನ್ನು ತರಬೇಕು. ಆದರೆ ಯಾರಿಗೂ ತಲಕಾವೇರಿಯ ಕೊಳಕ್ಕೆ ಇಳಿಯಲು ಅವಕಾಶ ನೀಡುವುದಿಲ್ಲ. ಬದಲಿಗೆ ಕಾವೇರಿ ತೀರ್ಥವನ್ನು ಭಕ್ತರ ಮೇಲೆ ಪ್ರೋಕ್ಷಣೆ ಮಾಡಲಾಗುತ್ತದೆ ಅಷ್ಟೇ ಎಂದರು.

ಕೋವಿಡ್ ಸೋಂಕು ವ್ಯಾಪಿಸುತ್ತಲೇ ಇರುವುದರಿಂದ ಭಕ್ತರು ಸಹಕಾರ ನೀಡಬೇಕೆಂದು ವಿ.ಸೋಮಣ್ಣ ಮನವಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು