News Karnataka Kannada
Wednesday, April 24 2024
Cricket
ಕರ್ನಾಟಕ

ಅ.1ರಂದು ಮಂಜೇಶ್ವರ ಬಂದರು ಲೋಕಾರ್ಪಣೆ

Photo Credit :

ಅ.1ರಂದು ಮಂಜೇಶ್ವರ ಬಂದರು ಲೋಕಾರ್ಪಣೆ

ಕಾಸರಗೋಡು: ಬಹುನಿರೀಕ್ಷಿತ ಮಂಜೇಶ್ವರ ಬಂದರು ಅ.1ರಂದು ಉದ್ಘಾಟನೆಗೊಳ್ಳಲಿದೆ. ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಂದರಿಗೆ ಚಾಲನೆ ನೀಡುವರು.

ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಮುಖ್ಯ ಅತಿಥಿಯಾಗಿರುವರು. ರಾಜ್ಯ ಮೀನುಗಾರಿಕೆ ಸಚಿವೆ ಮೆರ್ಸಿ ಕುಟ್ಟಿಯಮ್ಮ ಅಧ್ಯಕ್ಷತೆ ವಹಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕಎಂ.ಸಿ.ಕಮರುದ್ದೀನ್ ಮೊದಲಾದವರು ಉಪಸ್ಥಿತರಿರುವರು.

ದಶಕಗಳ ಬೆಸ್ತರ ಬೇಡಿಕೆ

ಕಾಸರಗೋಡು ಜಿಲ್ಲೆಯ ಮೀನುಗಾರಿಕೆ ವಲಯಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ಬಂದರು ನಿರ್ಮಾಣಗೊಳ್ಳಬೇಕು ಎಂಬ ಬೇಡಿಕೆ ತುಂಬ ಹಳೆಯದು. ಜಿಲ್ಲೆಯ ಕೊಯಿಪ್ಪಾಡಿ, ಶಿರಿಯ, ಬಂಗ್ರ ಮಂಜೇಶ್ವರ ಮತ್ಸ್ಯ ಗ್ರಾಮಗಳ ಸರಿಸುಮಾರು ಹತ್ತು ಸಾವಿರ ಮೀನುಗಾರರು ಈ ಬಂದರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಹಾರ್ಬರ್ಕಾರ್ಯಕಾರಿ ಇಂಜಿನಿಯರಿಂಗ್ ಎ.ಮುಹಮ್ಮದ್ ಅಶ್ರಫ್  ತಿಳಿಸಿದ್ದಾರೆ.

ಬಂದರು ಚಟುವಟಿಕೆ ಆರಂಭಿಸುವ ಮೂಲಕ ಸ್ಥಳೀಯ 1200ಕ್ಕೂ ಅಧಿಕ ಮೀನುಗಾರ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ, 4800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ. ಮೀನುಗಾರಿಕೆ ಸಂಬಂಧ ಮಾರಾಟ, ರಫ್ತು ಸಂಬಂಧಿ ವಲಯಗಳ ಮಂದಿಗೆ ಉದ್ಯೋಗಾವಕಾಶ ಅಧಿಕಗೊಳ್ಳಲಿವೆ.

ಮಂಜೇಶ್ವರ ಬಂದರು ಯೋಜನೆ ಒಟ್ಟು 48.80 ಕೋಟಿ ರೂ.ನಲ್ಲಿ ಜಾರಿಗೊಳ್ಳಲಿದೆ. ಇದರಲ್ಲಿ ಶೇ 75 ಕೇಂದ್ರಸರಕಾರದ ಪಾಲು, ಶೇ 25 ರಾಜ್ಯ ಸರಕಾರದ ಪಾಲು ಇರುವುದು. ಯೋಜನೆಗಾಗಿ ಈಗಾಗಲೇ 45.71 ಕೋಟಿ ರೂ. ವೆಚ್ಚನಡೆಸಲಾಗಿದೆ. ಪುಣೆಯ ಕೇಂದ್ರ ಸರಕಾರಿ ಸಂಸ್ಥೆ ಸೆಂಟ್ರಲ್ ವಾಟರ್ ಆಂಡ್ ಪವರ್ ರಿಸರ್ಚ್ ಸ್ಟೇಷನ್ ನಡೆಸಿರುವ ಅಧ್ಯಯನ ತಳಹದಿಯಲ್ಲಿ ಈ ಹಾರ್ಬರ್ ನ ರೂಪುರೇಷೆ ರಚನೆಗೊಂಡಿದೆ. ಹಾರ್ಬರ್ ಬೇಸಿನ್ ನೊಂದಿಗೆ ಸೇರಿಕೊಂಡು ಮುಸೋಡಿ ಪ್ರದೆಶದಲ್ಲಿ8.92 ಎಕ್ರೆ, ಹೊಸಬೆಟ್ಟು ಪ್ರದೇಶದಲ್ಲಿ 2.85 ಎಕ್ರೆ ಸಹಿತ 11.77 ಎಕ್ರೆ ಜಾಗದಲ್ಲಿ ನಿರ್ಮಾಣ ಚಟುವಟಿಕೆಗಳಿಗಾಗಿ ಡ್ರೆಡ್ಜಿಂಗ್ ನಡೆಸಲಾಗಿದೆ.

ಮೀನುಗಾರಿಕೆ ಜಲವಾಹನಗಳು ದಡಸೇರುವ ನಿಟ್ಟಿನಲ್ಲಿ ಶಾಂತಯುತ ಹಾರ್ಬರ್ ಬೇಸಿನ್ ಒದಗಿಸುವ ನಿಟ್ಟಿನಲ್ಲಿ 490 ಮೀಟರ್, 530 ಮೀಟರ್ ಉದ್ದನೆಯ ಉತ್ತರ ಮತ್ತು ದಕ್ಷಿಣದಲ್ಲಿ ಎರಡು ಬ್ರೇಕ್ ವಾಟರ್ ಗಳನ್ನು ನಿರ್ಮಿಸಲಾಗಿದೆ. 275ಬೋಟುಗಳಿಗೆ ಈ ಸೌಲಭ್ಯವಿದೆ. ಯೋಜನೆ ಸಂಬಂಧಿ ಚಟುವಟಿಕೆಗಳು ಮುಸೋಡಿ ಪ್ರದೇಶದ ಜಾಗದಲ್ಲಿ ನಡೆದಿವೆ. ಯಾಂತ್ರೀಕೃತಬೋಟುಗಳಿಗೆ 80 ಮೀಟರ್, ಕಿರು ದೋಣಿಗಳಿಗಾಗಿ 20 ಮೀಟರ್ ಸಹಿತ 100 ಮೀಟರ್ ವಾರ್ಫ್ ಮತ್ತು ಹರಾಜು ಕೇಂದ್ರವನ್ನೂ ನಿರ್ಮಿಸಲಾಗಿದೆ. ಅಪ್ರೋಚ್ ರಸ್ತೆ, ಪಾರ್ಕಿಂಗ್ ಏರಿಯಾ, ವರ್ಕ್ ಶಾಪ್, ಶಾಪ್ ಬಿಲ್ಡಿಂಗ್, ರೆಸ್ಟ್ ಶೆಡ್,ಟಾಯ್ಲೆಟ್ ಬ್ಲೋಕ್, ನೀರುಸಂಗ್ರಹಾಗಾರ, ಅತಿಥಿಗೃಹ, ವಿದ್ಯುದೀಕರಣ ಸಹಿತ ಎಲ್ಲ ಹಿನ್ನೆಲೆ ಸೌಲಭ್ಯ ಸಿದ್ಧಪಡಿಸಲಾಗಿದೆ.ರಾಜ್ಯ ಹಾರ್ಬರ್ ಇಂಜಿನಿಯರಿಂಗ್ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಸದ್ರಿ ಎರಡು ಮೀನು ಇಳಿಕೆ ಕೇಂದ್ರಯೋಜನೆಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಮಂಜೇಶ್ವರ ಮೀನು ಇಳಿಕೆ ಕೇಂದ್ರ ಚಟುವಟಿಕೆ ಸುಗಮಗೊಳಿಸುವ ನಿಟ್ಟಿನಲ್ಲಿ ಬ್ರೇಕ್ವಾಟರ್ ನ ಉದ್ದ ಹೆಚ್ಚಿಸುವ ಚಟುವಟಿಕೆ ಮುಂದುವರಿಯುತ್ತಿದೆ ಎಂದು ಕಾರ್ಯಕಾರಿ ಇಂಜಿನಿಯರ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು