News Karnataka Kannada
Sunday, April 14 2024
Cricket
ಕರ್ನಾಟಕ

ಅಂತಾರಾಜ್ಯ ಸಂಚಾರ ಮುಕ್ತಗೊಳ್ಳುವ ತನಕ ಹೋರಾಟ: ಬಿಜೆಪಿ ಎಚ್ಚರಿಕೆ

Photo Credit :

ಅಂತಾರಾಜ್ಯ ಸಂಚಾರ ಮುಕ್ತಗೊಳ್ಳುವ ತನಕ ಹೋರಾಟ: ಬಿಜೆಪಿ ಎಚ್ಚರಿಕೆ

ಕಾಸರಗೋಡು: ಅಂತಾರಾಜ್ಯ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳ್ಳುವ ತನಕ ಹೋರಾಟ ಮುಂದುವರಿಯಲಿದೆ  ಎಂದು ಬಿಜೆಪಿ ಜಿಲ್ಲಾಧ್ಯಕ್ಷ  ಕೆ. ಶ್ರೀಕಾಂತ್  ಮುನ್ನೆಚ್ಚರಿಕೆ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಗಡಿಯ ರಸ್ತೆಗಳನ್ನು ಮುಚ್ಚಿರುವುದರಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕಕ್ಕೆ  ತೆರಳಿದ್ದಲ್ಲಿ  ಕೊರೋನಾ  ಕೇರಳದ ವಾದ ಸರಿಯಲ್ಲ. ಕೇಂದ್ರ ಸರಕಾರದ ಮಾನದಂಡ ದಂತೆ  ಗಡಿ ಬಂದ್ ಮಾಡುವಂತಿಲ್ಲ. ಗಡಿಯಲ್ಲಿ ಯಾವುದೇ ನಿರ್ಬಂಧ  ಸಾಧ್ಯ ಇಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಉದ್ಯೋಗಕ್ಕೆ ತೆರಳುತ್ತಿದ್ದವರು  ಇಂತಹ ನಿರ್ಬಂಧಗಳಿಂದ ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.

ಕಾಸರಗೋಡಿನಿಂದ ಕರ್ನಾಟಕಕ್ಕೆ ಪರೀಕ್ಷೆ ವಿವಿಧ ಬರೆಯಲು ತೆರಳಿದ್ದ  ಯಾರಿಗೂ ಸೋಂಕು ದೃಢಪಟ್ಟಿಲ್ಲ.  ದೈನಂದಿನ ಪಾಸ್ ನಲ್ಲಿ ತೆರಳಿದ ಐದು ಮಂದಿಗೆ ಮಾತ್ರ ಸೋಂಕು  ಪತ್ತೆಯಾಗಿತ್ತು. ಸಮುದಾಯ ಹರಡುವಿಕೆ ಉಂಟಾಗಿಲ್ಲ. ಇಲ್ಲಸಲ್ಲದ  ವಾದ  ಮುಂದಿಟ್ಟು ಜಿಲ್ಲಾಡಳಿತ ಅಂತಾರಾಜ್ಯ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

ಕೇರಳ ಹೈಕೋರ್ಟ್  ನಾಲ್ಕು ರಸ್ತೆಗಳನ್ನು ತೆರೆಯಲು ಆದೇಶ ಕೊಟ್ಟಿದ್ದರೂ  ಗಾಡಿಯಲ್ಲಿ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅವೈಜ್ಞಾನಿಕ  ಮಾನದಂಡ ಗಡಿ ಪ್ರದೇಶದ ಜನತೆ ತಾಳ್ಮೆ ಗೆಡಿಸುತ್ತಿದೆ ಎಂದು ಆರೋಪಿಸಿದರು.

ದೈನಂದಿನ ಪಾಸ್  ರದ್ದುಗೊಳಿಸಿದ್ದರೂ ಪ್ರಯಾಣಿಕರ ಸಮಸ್ಯೆ ಮುಗಿಯುವುದಿಲ್ಲ.  ಮಾನದಂಡದಲ್ಲಿ ಬದಲಾವಣೆ ಇಲ್ಲ. ಇದು ಜನರನ್ನು  ಮೂರ್ಖರನ್ನಾಗಿಸುವ ತಂತ್ರ ಎಂದರು.

ಗಡಿಯ ಎಲ್ಲಾ ರಸ್ತೆಗಳನ್ನು ತೆರೆಯುವ ತನಕ  ಹೋರಾಟ  ಮುಂದುವರಿಯಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ  ಪಿ. ಸುರೇಶ್ ಕುಮಾರ್ ಶೆಟ್ಟಿ, ವಲಯ ಕಾರ್ಯದರ್ಶಿ ಸತೀಶ್ಚಂದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು