News Karnataka Kannada
Saturday, April 20 2024
Cricket
ಕರ್ನಾಟಕ

ಅಂತಾರಾಜ್ಯ ಗಡಿಗಳನ್ನು ತೆರೆದು ಮುಕ್ತ ಸಂಚಾರ ಕಲ್ಪಿಸಬೇಕು : ಹರ್ಷಾದ್ ವರ್ಕಾಡಿ ಸಿಎಂ ಗೆ ಮನವಿ

Photo Credit :

ಅಂತಾರಾಜ್ಯ ಗಡಿಗಳನ್ನು ತೆರೆದು ಮುಕ್ತ ಸಂಚಾರ ಕಲ್ಪಿಸಬೇಕು : ಹರ್ಷಾದ್ ವರ್ಕಾಡಿ ಸಿಎಂ ಗೆ ಮನವಿ

ಕಾಸರ ಗೋಡು: ಕೊರೋನ  ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಮತ್ತು ಮುಕ್ತ ಸಂಚಾರ ನಿರ್ಬಂಧದ ಕಾರಣಗಳಿಂದ ಮುಚ್ಚುಗಡೆಯಾಗಿದ್ದ

ಅಂತಾರಾಜ್ಯ ಗಡಿಗಳನ್ನು ತೆರೆದು ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಹರ್ಷಾದ್ ವರ್ಕಾಡಿಯವರು ಕೇರಳ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.

ಲಾಕ್ ಡೌನ್ ತೆರವುಗೊಳಿಸಿ ಅನ್ ಲಾಕ್ ಪ್ರಕ್ರಿಯೆಯ ಮೂರನೇ ಹಂತದಲ್ಲಿದ್ದರೂ, ಕೇಂದ್ರ ಸರ್ಕಾರದ ನಿರ್ದೇಶನಗಳಂತೆ ಅಂತಾರಾಜ್ಯ ಗಡಿಗಳನ್ನು ಮುಕ್ತ ಸಂಚಾರಕ್ಕೆ ತೆರೆದು ಕೊಡಲು ಕಾಸರಗೋಡು ಜಿಲ್ಲಾಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಸರಗೋಡಿನ ಜನತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜೊತೆಗೆ ಶತ ಶತಮಾನಗಳಿಂದ ಸಾಂಸ್ಕೃತಿಕ ಮತ್ತು ವ್ಯಾವಹಾರಿಕ ಸಂಬಂಧಗಳಿವೆ. ಶಿಕ್ಷಣ, ಚಿಕಿತ್ಸೆ, ಉದ್ಯೋಗ, ಕೃಷ್ಯುತ್ಪನ್ನಗಳ ಮಾರಾಟ, ಆಹಾರ ವಸ್ತುಗಳ ಖರೀದಿ,ಮೀನುಗಾರಿಕೆ, ಟೆಕ್ಸ್ ಟೈಲ್ಸ್ ಎಂಬಿತ್ಯಾದಿ ಹಲವಾರು ಅಗತ್ಯಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಸರಗೋಡಿನ ಜನತೆ ಅವಲಂಬಿಸಿದ್ದಾರೆ. ಸಹಸ್ರಾರು ಜನರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ದಿನನಿತ್ಯ ಉದ್ಯೋಗಕ್ಕೆ ತೆರಳಿ ಕುಟುಂಬ ಪೋಷಿಸಬೇಕಾದ ಜನರು ಅಕ್ಷರಶಃ ಹಸಿವಿನಿಂದ ಕಂಗಾಲಾಗಿದ್ದಾರೆ. ಪರಿಣತ ವೈದ್ಯಕೀಯ ಚಿಕಿತ್ಸೆ ಕೂಡಾ ಇಲ್ಲಿನ ಜನರಿಗೆ ನಿರಾಕರಿಸಲ್ಪಟ್ಟಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಶೈಕ್ಷಣಿಕ ವರ್ಷದ ದಾಖಲಾತಿ ಆರಂಭಗೊಳ್ಳುವ ಸೂಚನೆಗಳಿದ್ದು, ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಣದಿಂದಲೂ ವಂಚಿತರಾಗುವ ಸಾಧ್ಯತೆಗಳಿವೆ. ಈ ನಿರ್ಬಂಧದ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರು ತಾವು ಉದ್ಯೋಗ ಮಾಡುತ್ತಿರುವ ಅಲ್ಲಿನ ಉದ್ಯಮ ಸಂಸ್ಥೆಗಳಿಗೆ ಹೋಗಲು ಅಸಾಧ್ಯವಾದ ಕಾರಣ , ಹಲವರಿಗೆ ಉದ್ಯೋಗ ನಷ್ಟವಾಗುವ ಭೀತಿಯಿದೆ. 

ಕೋವಿಡ್ ಮುಂಜಾಗ್ರತೆ ಪಾಲಿಸಿ ಎರಡೂ ರಾಜ್ಯಗಳಲ್ಲಿ ಜನರು ಮುಕ್ತವಾಗಿ ಸಂಚರಿಸುವಂತೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಈ ವಿಷಯವನ್ನು ಹಲವು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ, ಅದು ಸಂವೇದನೆ ಕಳೆದುಕೊಂಡಂತೆ ವರ್ತಿಸುತ್ತಿದೆ. 

ಆದುದರಿಂದ ಕೇಂದ್ರ ನಿರ್ದೇಶನದ ಹಿನ್ನೆಲೆಯಲ್ಲಿ, ಕಾಸರಗೋಡು ಜನತೆಯ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ತಲಪಾಡಿ ಮೂಲಕ ಕರ್ನಾಟಕ ರಾಜ್ಯವನ್ನು ಪ್ರವೇಶಿಸಲು ಕಾಸರಗೋಡು ಜಿಲ್ಲಾಡಳಿತ ಹೇರಿದ ತಡೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲು ಶ್ರೀ ಹರ್ಷಾದ್ ವರ್ಕಾಡಿ ಕೇರಳದ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು