News Karnataka Kannada
Thursday, April 25 2024
Cricket
ಕರ್ನಾಟಕ

ಅಂಕೋಲಾದ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಸಚಿವ ಸಂಪುಟದಲ್ಲಿ ಅಸ್ತು

Photo Credit :

ಅಂಕೋಲಾದ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಸಚಿವ ಸಂಪುಟದಲ್ಲಿ ಅಸ್ತು

ಕಾರವಾರ:ಸೀಬರ್ಡ್ ನೌಕಾನೆಲೆ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಜಿಲ್ಲೆಯ ಸಾಮಾನ್ಯ ನಾಗರಿಕರಿಗೂ ಬಳಕೆಗೆ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವಕಾಶ ಕಲ್ಪಿಸುವ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

ಇದರಿಂದ ಜಿಲ್ಲೆಯ ಜನರ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ವಿಮಾನಯಾನದ ಕನಸು ಶೀಘ್ರವೇ ಫಲಿಸುವ ಸಾಧ್ಯತೆ ಇದೆ. ಅಂಕೋಲಾ ತಾಲೂಕಿನ ಅಲಗೇರಿ ಗ್ರಾಪಂ ವ್ಯಾಪ್ತಿಯ ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆಯ ಎರಡನೇ ಹಂತ ಯೋಜನೆಯಲ್ಲಿ ಡಿಫೆನ್ಸ್ ಬಳಕೆಗಾಗಿ ವಿಮಾನ ನಿಲ್ದಾಣವೂ ಸೇರಿದೆ. ಆದರೆ ಇದನ್ನು ಸಾರ್ವಜನಿಕ ಬಳಕೆಗೂ ನೀಡಬೇಕು ಎನ್ನುವ ಬೇಡಿಕೆ ಕಳೆದ ಕೆಲವು ವರ್ಷಗಳಿಂದ ಪ್ರಸ್ತಾಪದಲ್ಲಿತ್ತು.

ಭೂಸ್ವಾಧೀನದ ಅಂದಾಜು ವೆಚ್ಚ 27.84 ಕೋಟಿ ರೂ. ಹಾಗೂ ಕೆಎಸ್ಐಐಡಿಸಿ ಪ್ರಕಾರ ನಿರ್ಮಾಣಕ್ಕಾಗಿ 82 ಕೋಟಿ ರೂ. ಗಳ ಅವಶ್ಯಕತೆ ಇದೆ ಎನ್ನುವ ವಿಷಯ ಚರ್ಚಿಸಲಾಗಿದೆ. ಭೂ ಸ್ವಾಧೀನಪಡಿಸಿಕೊಳ್ಳವ ವೆಚ್ಚವನ್ನು ಮಾತ್ರ ರಾಜ್ಯ ಸರಕಾರ ಭರಿಸಲು ಉದ್ದೇಶಿಸಲಾಗಿದ್ದು ಸಿವಿಲ್ ಟರ್ಮಿನಲ್ ಮತ್ತು ಇತರೆ ಸೌಲಭ್ಯಗಳ ನಿರ್ಮಾಣ ವೆಚ್ಚವನ್ನು ರಾಜ್ಯ ಸರಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಧ್ಯೆಯ ಆಗಲಿರುವ ಜಂಟಿ ಸಹಭಾಗಿತ್ವದ ಕಂಪೆನಿ ಮೂಲಕ ಭರಿಸಲು ಅಥವಾ ವಿಮಾನ ನಿಲ್ದಾಣವನ್ನು ಪಿಪಿಪಿ ಆಧಾರದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ  

ಅಂಕೋಲಾದ ಅಲಗೇರಿಯಲ್ಲಿ ಸೀಬರ್ಡ್ ನೌಕಾನೆಲೆ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಸಾರ್ವಜನಿಕ ಬಳಕೆಗೂ ಅನುವು ನೀಡಲಬೇಕು ಎಂದು ಕ್ರಮಕೈಗೊಳ್ಳಲಾಗಿದೆ. ಈ ವಿಷಯ ಕಳೆದ 2019ರ ನ.15ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ನೌಕಾನೆಲೆ ರಾಜ್ಯ ಮಟ್ಟದ ಸಮನ್ವಯ ಸಮಿತಿಯಲ್ಲಿ ಸಿವಿಲ್ ಎನ್ ಕ್ಲೇವ್ ಅಭಿವೃದ್ಧಿ ಕುರಿತು ನೀಡಿದ ನಿರ್ದೇಶನದಂತೆ 2019ರ ನ.30ರಂದು ಸರಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಕೆಎಸ್ಐಐಡಿಸಿ ಸಂಸ್ಥೆ ಹಾಗೂ ನೌಕಾ ಅಧಿಕಾರಿಗಳೊಂದಿಗೆ ಸ್ಥಳ ಪರಿವೀಕ್ಷಣೆ ಕೈಗೊಳ್ಳಲಾಗಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು