ದುಬೈ: ಬಹುಭಾಷ ಚಿತ್ರ ನಿರ್ಮಾಪಕ ಡಾ|ಫ್ರ್ಯಾಂಕ್ ಫೆರ್ನಾಂಡಿಸ್ ನಿರ್ಮಾಣಾದ ಬಹು ನಿರೀಕ್ಷಿತ ಚಿತ್ರ ಪ್ರೀಮಿಯರ್ ಶೋ ಇದೇ ನವಂಬರ್ ತಿಂಗಳ 17 ರಂದು ದುಬಾಯಿಯಲ್ಲಿ ಜರುಗಲಿರುವುದು.
ಕೊಂಕಣಿ ಖ್ಯಾತ ಸಾಹಿತಿ ಡೊಲ್ಫಿ ಕಾಸ್ಸಿಯಾರವರ ಕಥೆ ಹಾಗೂ ರಘು ರಟ್ಟಾಡಿಯವರ ಸಂಭಾಷಣೆಯಿರುವ ಈ ಚಿತ್ರವನ್ನು ಪ್ರದೀಪ್ ಬರ್ಬೋಜಾ ರವರು ನಟಿಸಿ ನಿರ್ದೇಶಿಸಿರುವ ʻಕಥೆ ಮುಗಿದಿದೆʼ ಚಿತ್ರ ದುಬಾಯಿಯಲ್ಲಿ ಪ್ರಪ್ರಥಮ ಪ್ರದರ್ಶನ ಕಾಣುತ್ತಿದೆ. ದೀಪಕ್ ಪಲಡ್ಕ, ಮೆಲ್ಲು ವಾಲೆನ್ಸಿಯಾ ಹಾಗೂ ಸ್ಟಾನಿ ಬೇಳಾ ಇವರು ಪೋಷಕ ಪಾತ್ರಾದಲ್ಲಿ ನಟಿಸಿದ್ದಾರೆ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕೆಲವೇ ದಿನಗಳಲ್ಲಿ ಇದರ ಟ್ರೈಲರ್ ಬಿಡುಗಡೆಯಾಗಲಿರುವುದು. ದುಬಾಯಿಯಲ್ಲಿರುವ ಎಲ್ಲಾ ಕನ್ನಡ ಅಭಿಮಾನಿಗಳು ಈ ಚಿತ್ರತಂಡಕ್ಕೆ ಪ್ರೊತ್ಸಾಹಿಸಿ ಸಹಕರಿಸಬೇಕೆಂದು ವಿನಂತಿ.
Ad