ಮುಂಬಯಿ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮಲಾಡ್ ಕಳೆದ 15 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುದರೊಂದಿಗೆ ಅಸಾಯಕರಿಗೆ ಸಹಕರಿಸುತ್ತ್ರಿದ್ದು, ಸ್ಥಳೀಯ ತುಳು ಕನ್ನಡಿಗರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಭಿಪ್ರಾಯಪಟ್ಟರು.
ಸಮಿತಿಯ 15ನೇ ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ. 18ರಂದು ಶ್ರೀ ಸ್ವಾಮಿ ನಾರಾಯಣ ಮಂದಿರ ಸಭಾಗೃಹ, ಮಲಾಡ್ ಪೂರ್ವ ಇಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಆಗಮಿಸಿದ ಆಗಮಿಸಿದ ಐಕಳ ಹರೀಶ್ ಶೆಟ್ಟಿಯವರು ಯಾವುದೇ ಜನಪರ ಕಾರ್ಯಕ್ರಮವನ್ನು ನಡೆಸಲು ದಾನಿಗಳ ಸಹಾಯ ಅಗತ್ಯ. ಇಂದು ಸನ್ಮಾನ ಕಾರ್ಯಕ್ರಮ ನಡೆದಿದ್ದು, ಸಾಧಕರನ್ನು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು. ಇನ್ನೊರ್ವ ಮುಖ್ಯ ಅತಿಥಿ ಅಂತರಾಷ್ಟ್ರೀಯ ಮಟ್ಟದ ಜ್ಯೋತಿಷ್ಯ ಡಾ. ಎಂ ಜೆ ಪ್ರವೀಣ್ ಭಟ್, ಮಾತನಾಡುತ್ತಾ ಮಲಾಡ್ ಪರಿಸರಕ್ಕೂ ನನಗೂ ನಿಕಟ ಸಂಪರ್ಕವಿದ್ದು, ಈ ಸಂಸ್ಥೆಗೆ ನನ್ನ ಕೊಡುಗೆ ಯಾವತ್ತೂ ಇದೆ, ನನ್ನ ಯಶಸ್ಸಿಗೆ ಕಾರಣರಾದವರನ್ನು ಎಂದೂ ಮರೆಯುವಂತಿಲ್ಲ ಎನ್ನುತ್ತಾ ವರಮಹಾಲಕ್ಷ್ಮೀಯ ಆಶೀರ್ವಾದದಿಂದ ಸಮಿತಿಯು ಇನ್ನು ಉನ್ನತ ಮಟ್ಟಕ್ಕೇರಲಿ ಎಂದರು.
ಐವತ್ತು ವರ್ಷ ಪೂರೈಸಿದ ಮಾಲಾಡ್ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಕುರಾರ್ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ ಇವರನ್ನು ಗೌರವಿಸಲಾಯಿತು. ಬಿಲ್ಲವರ ಅಶೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ, ಭಾರತ್ ಬ್ಯಾಂಕಿನ ನಿರ್ದೇಶಕ ಸಂತೋಷ್ ಕೆ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಗಳಿಸಿ ಉತ್ತೀರ್ಣರಾದ ಸ್ಥಳೀಯ ಪ್ರತಿಭೆಗಳನ್ನು ಗೌರವಿಸಲಾಯಿತು.
ಗೌರವ ಅತಿಥಿಗಳಾಗಿ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಅಭ್ಯುದಯ ಬ್ಯಾಂಕಿನ ಸಿಇಓ ಹಾಗೂ ಎಂಡಿ ಪ್ರೇಮ್ ನಾಥ್ ಸಾಲ್ಯಾನ್, ಬಂಟರ ಸಂಘ ಮುಂಬಯಿ ಯ ಜೊತೆ ಕೋಶಾಧಿಕಾರಿ ಶಶಿಧರ ಕೆ ಶೆಟ್ಟಿ ಇನ್ನಂಜೆ, ಬಂಟರ ಸಂಘ ಮುಂಬಯಿ ಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಲ್ಲಾರ್, ಕುಲಾಲ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಗಿರೀಶ್ ಸಾಲ್ಯಾನ್, ವರ್ಲಿಯ ಅಪ್ಪಾಜಿ ಬೀಡು ಫೌಂಡೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ , ನಿಧಿ ಬಿಯರ್ ಶಾಪ್ ಕಾಂದಿವಲಿಯ ಸುರೇಂದ್ರ ಶೆಟ್ಟಿ ಹೊಸ್ಮಾರ್, ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಸಮಾಜ ಸೇವಕ, ನಿತ್ಯಾನಂದ ಪೂಜಾರಿ ಬೈಕುಲ, ಸಂತೋಷ್ ಗೋಪಾಲ್ ಪೂಜಾರಿ, ಉದಯ ಶೆಟ್ಟಿ ಮುನಿಯಾರ್, ಪ್ರಿಯಾಂಕ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಹೋರಿಲ್ ಗುಪ್ತ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಲ್ಲದೆ ಸಮಿತಿಯ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಅವರು 15 ವರ್ಷಗಳ ಅವಧಿಯಲ್ಲಿ ಪರಿಸರದ ತುಳು ಕನ್ನಡಿಗರನ್ನು ಸೇರಿಸಿ ನಮ್ಮ ನಾಡಿನ ಸಂಸ್ಕೃತಿ, ಭಾಷೆ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದೇವೆ. ಇಂದು ಹಿರಿ ಕಿರಿಯರು ಯಕ್ಷಗಾನವನ್ನು ಕಲಿತು, ಕನ್ನಡ ಬಾರದೇ ಇದ್ದರೂ ಕೂಡ ಕನ್ನಡ ಸಂಭಾಷಣೆಯನ್ನು ಇಂಗ್ಲಿಷ್ ನಲ್ಲಿ ಬರೆದು ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನವನ್ನು ನೀಡಿದ್ದಾರೆ ಎನ್ನಲು ಅಭಿಮಾನವಾಗುತ್ತದೆ ಎನ್ನುತ್ತಾ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು.
ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಚಾಲಕ ದಿನೇಶ್ ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು, ಕಾರ್ಯದರ್ಶಿ ದಿನೇಶ್ ಎಸ್. ಪೂಜಾರಿ, ಕೋಶಾಧಿಕಾರಿ ಜಗನ್ನಾಥ್ ಎಚ್. ಮೆಂಡನ್, ಉಪಾಧ್ಯಕ್ಷ ವಿ. ಕುಮರೇಶ್ ಆಚಾರ್ಯ, ಜೊತೆ ಕಾರ್ಯದರ್ಶಿ ಸನತ್ ಪೂಜಾರಿ, ಜೊತೆ ಕೋಶಾಧಿಕಾರಿ ಸುಂದರ್ ಪೂಜಾರಿ, ಸಲಹಾ ಸಮಿತಿಯ ಪರಮಾನಂದ ಭಟ್, ರವಿ ಸ್ವಾಮೀಜಿ ಮತ್ತು ವೇದಾನಂದ ಸ್ವಾಮಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್, ಉಪಕಾರ್ಯಾಧ್ಯಕ್ಷರುಗಳಾದ ಲಲಿತ ಎಸ್ ಗೌಡ, ಗೀತಾ ಜೆ. ಮೆಂಡನ್, ಸಂಧ್ಯಾ ಪ್ರಭು, ಕಾರ್ಯದರ್ಶಿ ಶ್ರೀಮತಿ ಕೆ. ಆಚಾರ್ಯ, ಕೋಶಾಧಿಕಾರಿ ಶೀಲಾ ಪೂಜಾರಿ, ಜೊತೆ ಕಾರ್ಯದರ್ಶಿ ಶೋಬಾ ರಾವ್, ಜೊತೆ ಕೋಶಾಧಿಕಾರಿಗಳಾದ ನಳಿನಿ ಕರ್ಕೇರ ಮತ್ತು ಜಯಲಕ್ಷ್ಮಿ ನಾಯಕ್, ಸಲಹಾ ಸಮಿತಿಯ ಸದಸ್ಯರಾದ ಮೋಹಿನಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್, ಉಪಕಾರ್ಯಾಧ್ಯಕ್ಷರುಗಳಾದ ದಿವ್ಯ ಎನ್ ಅಮೀನ್, ಯೋಗೇಶ್ವರಿ ಅರ್ ಗೌಡ ಮತ್ತು ನವೀನ್ ಯು ಸಾಲ್ಯಾನ್, ಕಾರ್ಯದರ್ಶಿ ಸುದೀಪ್ ಪೂಜಾರಿ, ಕೋಶಾಧಿಕಾರಿ ದಿಶಾ ಕರ್ಕೇರ, ಸಂಚಾಲಕ ಡಾ. ಸಶಿನ್ ಆಚಾರ್ಯ, ಜೊತೆ ಕೋಶಾಧಿಕಾರಿ ಶಿವಾನಿ ಪ್ರಭು, ಜೊತೆ ಕಾರ್ಯದರ್ಶಿ ಪವನ್ ರಾವ್, ಸಲಹಾ ಸಮಿತಿಯ ಸದಸ್ಯರಾದ ರಶ್ಮಿ ಪೂಜಾರಿ, ಪ್ರಣಿತಾ ಶೆಟ್ಟಿ, ಹರ್ಷ ಕುಂದರ್ ನಿಧಿ ನಾಯಕ್ ಮೊದಲಾದವರು ಸಹಕರಿಸಿದರು.
ಸಮಿತಿಯ ಸದಸ್ಯರಿಂದ ಯಕ್ಷಗುರು ನಾಗೇಶ ಪೊಳಲಿ ನಿರ್ದೇಶನದಲ್ಲಿ ಸಿ ಎ ಸುರೇಂದ್ರ ಕೆ ಶೆಟ್ಟಿ, ರವೀಂದ್ರನಾಥ್ ಬಂಡಾರಿ, ಪದ್ಮನಾಭ ಕಟೀಲು ದುಬಾಯಿ, ಪ್ರಣೀತ ವರುಣ್ ಶೆಟ್ಟಿ ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳೆಯರ ಸಹಕಾರದೊಂದಿಗೆ ’ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.
ಸಭಾ ಕಾರ್ಯಕ್ರಮದ ನಂತರ ವೇದಮೂರ್ತಿ ಶ್ರೀ ರಮೇಶ್ ವಾಗ್ಲೆ ಡೊಂಬಿವಲಿ, ಇವರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಸುಮಾರು 400ಕ್ಕೂ ಮಿಕ್ಕಿ ಸುಮಂಗಲೆಯರು ಪಾಲ್ಗೊಂಡಿದ್ದರು. ಪೂಜಾ ಸೇವೆಯನ್ನು ಮೋಹಿನಿ ಜಗನ್ನಾಥ್ ಶೆಟ್ಟಿ ಮತ್ತು ಪರಿವಾರದವರು ನಡೆಸಿದರು. ಆನಂತರ ಮಹಾಮಂಗಳಾರತಿ, ಮಹಾಪ್ರಸಾದ ಹಾಗೂ ಅನ್ನಪ್ರಸಾದ ನಡೆಯಿತು.
ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ. ಮಕ್ಕಳು ಎಳೆಯದರಲ್ಲೇ ಪರಿಶ್ರಮ ವಹಿಸುವ ಅಗತ್ಯವಿದೆ. ಇದು ಅವರ ಮುಂದಿನ ಜೀವನಕ್ಕೆ ಪ್ರಯೋಜನಕಾರಿಯಾಗುವುದು. ಮಕ್ಕಳಿಗೆ ನಾಡಿನ ಸಂಸ್ಕೃತಿಯನ್ನು ತಿಳಿಸುವ ಕಾರ್ಯ ಮುಂದುವರಿಯಲಿ. ಹಿರಿಯರನ್ನು, ಮಹಿಳೆಯರನ್ನು ಹಾಗೂ ಪರಿಸರವನ್ನು ಗೌರವಿಸೋಣ ಎಂದು ಡಾ. ವಿಜೇತ ಶೆಟ್ಟಿ, ಪ್ರಾಂಶುಪಾಲೆ , ವಿವೇಕ್ ವಿದ್ಯಾಲಯ ಗೋರೆಗಾಂವ್ (ಪ.) ತಿಳಿಸಿದರು.
ಇಂದು ನನಗೆ ಯಕ್ಷಗಾನದಲ್ಲಿ ಪಾತ್ರವಹಿಸುವ ಅವಕಾಶ ಸಿಕ್ಕಿದೆ. ಯಕ್ಷಗಾನ ನಮ್ಮ ತುಳು ನಾಡಿನ ಕಲೆ. ವರಮಹಾಲಕ್ಷ್ಮಿ ಪೂಜಾ ಸಮಿತಿಯು ಆಧ್ಯಾತ್ಮಿಕ ಕೇಂದ್ರವಾಗಿದ್ದು, ಎಲ್ಲರಿಗೂ ವರಮಹಾಲಕ್ಷ್ಮಿ ಆಶೀರ್ವದಿಸಲಿ ಎಂದು ಸಿಎ ಸುರೇಂದ್ರ ಶೆಟ್ಟಿ, ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಷನ್ ಇವರು ನುಡಿದರು.
ಇನ್ನು ಶ್ರೀನಿವಾಸ ಸಾಫಲ್ಯ ಇವರು ಮಾತನಾಡಿ, ಇಂದು ಈ ಧಾರ್ಮಿಕ ವೇದಿಕೆಯ ಗಣ್ಯಾತಿ ಗಣ್ಯರಿಂದ ಸನ್ಮಾನ ಪಡೆದಿದ್ದು ಇದಕ್ಕೂ ಋಣ ಬೇಕು. ನಮ್ಮ ಜೀವನ ಹಾಲಿನಿಂದ ಪಡೆದ ಬೆಣ್ಣೆಯಂತಿರಬೇಕು. ಅದು ಯಾವಾಗಲೂ ಹಾಳಾಗುದಿಲ್ಲವಂತೆ. ಜೀವನ ಭಕ್ತಿ ಮಾರ್ಗದಿಂದ ಮುಕ್ತಿ ಮಾರ್ಗದಲ್ಲಿ ನಡೆಯುವಂತಾಗಲಿ. ಈ ಗೌರವವನ್ನು ನಮ್ಮ ಶನಿ ಮಹಾತ್ಮಾ ಪೂಜಾ ಸಮಿತಿಗೆ ಅರ್ಪಿಸುತ್ತಿರುವೆನು ಎಂದರು.
ನಾನು ಈ ಸಮಿತಿಯ ಒಂದು ಅಂಗವಾಗಿದ್ದು, ಸನ್ಮಾನಿಸಿದಕ್ಕೆ ಸಮಿತಿಗೆ ಆಭಾರಿಯಾಗಿದ್ದೇನೆ. ಪವಿತ್ರವಾದ ದಿನದಲ್ಲಿ ಪವಿತ್ರವಾದ ಸ್ಥಳದಲ್ಲಿ ಸನ್ಮಾನವನ್ನು ಸ್ವೀಕರಿಸಿದೇನೆ. ನಾರಾಯಣ ಗುರುಗಳ ತತ್ವದಂತೆ ನಾವೆಲ್ಲರೂ ಒಂದೇ ಮನೆಯವರಂತೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಸಂತೋಷ್ ಕೆ ಪೂಜಾರಿ, ಬಿಲ್ಲವರ ಅಶೋಷಿಯೇಶನ್ ಮಲಾಡ್ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷರು, ಭಾರತ್ ಬ್ಯಾಂಕಿನ ನಿರ್ದೇಶಕರು ನುಡಿದರು.