Bengaluru 24°C
Ad

5ನೇ ಮಹಡಿಯಿಂದ ಬಿದ್ದು ಯುವತಿ ಸಾವು : ಬೆಚ್ಚಿ ಬೀಳಿಸುತ್ತೆ ವಿಡಿಯೋ

ಹೈದ್ರಾಬಾದ್: ಯುವತಿಯೋರ್ವಳು ರಾಮನಗರದ ಅಪಾರ್ಟ್​ಮೆಂಟ್​​ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವತಿ ಕಟ್ಟದಿಂದ ಜಿಗಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಆಕೆಯ ಭೀಕರ ಅಂತ್ಯವನ್ನು ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ.

ರಾಮನಗರದ ಗಿರಿಶಿಖರ ಅಪಾರ್ಟ್​ಮೆಂಟ್​ನಲ್ಲಿ ಈ ಒಂದು ಘಟನೆ ನಡೆದಿದೆ. ಯುವತಿ ಅಪಾರ್ಟ್​ಮೆಂಟ್​ನ ಐದನೇ ಮಹಡಿಯಿಂದ ಕೆಳಗೆ ನೆಗೆಯುವ ವಿಡಿಯೋವನ್ನು ಸ್ಥಳೀಯರೆ ಮಾಡಿಕೊಂಡಿದ್ದಾರೆ. ಆಕೆ ಮಹಡಿ ಏರಿ ಕುಳಿತಿದ್ದನ್ನು ಕಂಡ ಜನರು ನೆಗೆಯಬೇಡ, ಆಚೆ ಬಾ ಎಂದು ಕೂಗಿ ಹೇಳಿದ್ದಾರೆ. ಆದ್ರೆ ಕೊಂಚ ಹೊತ್ತು ಸುಮ್ಮನೆ ಕುಳಿತಿದ್ದ ಯುವತಿ ಬಳಿಕ ತಾನು ಕುಳಿತಿದ್ದ ಐದನೇ ಮಹಡಿಯಿಂದ ನೆಗೆದಿದ್ದಾಳೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಸಾನಿಯಾ ಬೇಗಂ ಅಪಾರ್ಟ್​ಮೆಂಟ್​ನೊಳಕ್ಕೆ ನುಗ್ಗಿ ಕಟ್ಟಡದ ಟೆರಸ್​ಗೆ ಬಂದು ಮೊಬೈಲ್​ನಲ್ಲಿ ಯಾರದೋ ಜೊತೆ ಮಾತನಾಡುತ್ತಿದ್ದಳಂತೆ. ಇದಾದ ಬಳಿಕ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟಿದ್ದಾಳೆ. ಈ ಘಟನೆಗೆ ಸಾಕ್ಷಿಯಾಗಿದ್ದ ಸ್ಥಳೀಯರು ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಆದ್ರೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಯುವತಿ ಕಟ್ಟದಿಂದ ಜಿಗಿದ ಸಾವಿಗೆ ಶರಣಾಗಿದ್ದಳು.ಸದ್ಯ ಆತ್ಮಹತ್ಯೆಗೆ ಕಾರಣವೇನು ಅನ್ನೋದನ್ನ ಕಂಡುಹಿಡಿಯುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Ad
Ad
Nk Channel Final 21 09 2023