Bengaluru 23°C
Ad

ವಿಶ್ವದ ಮೊದಲ 3ಡಿ ಪ್ರಿಂಟೆಡ್ ರಾಕೆಟ್‌ ಹಾರಿಸಿದ ಭಾರತ..!

ಅಂತರಿಕ್ಷ ವಲಯದಲ್ಲಿ ಮಹತ್ತರ ಸಾಧನೆಯೊಂದು ಗುರುವಾರ ನಡೆದಿದೆ. 3ಡಿ ಪ್ರಿಂಟೆಡ್ ಸೆಮಿ ಕ್ರಯೋಜೆನಿಕ್ ಎಂಜಿನ್ ಬಳಸಿ 'ಅಗ್ನಿಬಾನ್' ಎಂಬ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗಿದೆ. ಈ ರೀತಿ 3ಡಿ ಪ್ರಿಂಟೆಡ್ ಎಂಜಿನ್ ಅನ್ನು ರಾಕೆಟ್‌ವೊಂದಕ್ಕೆ ಬಳಸಿ ಉಡಾವಣೆ ಮಾಡಿದ್ದು ವಿಶ್ವದಲ್ಲೇ ಮೊದಲು.

ನವದೆಹಲಿ: ಅಂತರಿಕ್ಷ ವಲಯದಲ್ಲಿ ಮಹತ್ತರ ಸಾಧನೆಯೊಂದು ಗುರುವಾರ ನಡೆದಿದೆ. 3ಡಿ ಪ್ರಿಂಟೆಡ್ ಸೆಮಿ ಕ್ರಯೋಜೆನಿಕ್ ಎಂಜಿನ್ ಬಳಸಿ ‘ಅಗ್ನಿಬಾನ್’ ಎಂಬ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಲಾಗಿದೆ. ಈ ರೀತಿ 3ಡಿ ಪ್ರಿಂಟೆಡ್ ಎಂಜಿನ್ ಅನ್ನು ರಾಕೆಟ್‌ವೊಂದಕ್ಕೆ ಬಳಸಿ ಉಡಾವಣೆ ಮಾಡಿದ್ದು ವಿಶ್ವದಲ್ಲೇ ಮೊದಲು.

ಇಸ್ರೋ ಪ್ರಾಬಲ್ಯ ಹೊಂದಿರುವ ಶ್ರೀಹರಿಕೋಟದಲ್ಲಿ ತಾನೂ ಹೊಂದಿರುವ ಉಡ್ಡಯನ ನೆಲೆಯನ್ನು ಬಳಸಿಕೊಂಡು ಚೆನ್ನೈ ಮೂಲದ ಅಗ್ನಿಕುಲ್ ಕಾಸ್ಟೋಸ್ ಎಂಬ ಬಾಹ್ಯಾಕಾಶದ ಸ್ಟಾರ್ಟಪ್ ಕಂಪನಿಯೊಂದು ಈ ಸಾಧನೆ ಮಾಡಿದೆ. ಉಪಕಕ್ಷೆಗೆ ರಾಕೆಟ್ ಉಡಾವಣೆ ಮಾಡುವ ಪ್ರಯೋಗವನ್ನು ಗುರುವಾರ ನಡೆಸಿ ಕಂಪನಿ ಯಶಸ್ವಿಯಾಗಿದೆ. ಇಂತಹ ಸಾಧನೆ ಮಾಡಿದ ದೇಶದ ಎರಡನೇ ಕಂಪನಿ ಅಗ್ನಿಕುಲ್ ಆಗಿದೆ.

Ad
Ad
Nk Channel Final 21 09 2023
Ad