ನವದೆಹಲಿ : ಕೆಲಸದ ಒತ್ತಡ ತಾಳಲಾರದೇ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ತರುಣ್ (42) ಸಾವಿಗೆ ಶರಣಾದ ಉದ್ಯೋಗಿ. ಬಜಾಜ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತಮ್ಮ ಕೆಲಸ ಕಳೆದುಕೊಳ್ಳುವ ಬಗ್ಗೆ ತೀವ್ರ ಆತಂಕಕ್ಕೊಳಗಾಗಿದ್ದು ಈ ಪತ್ರದಲ್ಲಿ ವ್ಯಕ್ತವಾಗಿದೆ.
ದೆಹಲಿಯ ಝಾನ್ಸಿಯಲ್ಲಿರುವ ತನ್ನ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ ಅವರ ತರುಣ್ ಶವ ಪತ್ತೆಯಾಗಿದೆ. ಅವರ ಪತ್ನಿ ಮೇಘಾ ತನ್ನ ಪತಿ ಸೂಸೈಡ್ ನೋಟ್‌ನಲ್ಲಿ ಏನಿದೆ ಎಂಬುದನ್ನು ಹಂಚಿಕೊಂಡಿದ್ದು, ಬಜಾಜ್ ಫೈನಾನ್ಸ್ ಲೋನ್‌ಗಳ EMI ಗಳನ್ನು ವಸೂಲಿ ಮಾಡಲು ಮತ್ತು ಟಾರ್ಗೆಟ್ ಪೂರೈಸದ ಕಾರಣ ತಮ್ಮ ಕಂಪನಿ ಯಲ್ಲಿ ಪದೇ ಪದೇ ಅವಮಾನ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾನು ಭವಿಷ್ಯದ ಬಗ್ಗೆ ತುಂಬಾ ಆತಂಕಕ್ಕೊಳಗಾಗಿದ್ದೇನೆ. ನಾನು ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ. ನಾನು 45 ದಿನಗಳಿಂದ ನಿದ್ದೆ ಮಾಡಿಲ್ಲ, ತುಂಬಾ ಒತ್ತಡದಲ್ಲಿದ್ದೇನೆ. ಹೇಗಾದ್ರೂ ಸರಿ ಟಾರ್ಗೆಟ್ ಪೂರೈಸಬೇಕು ಅಥವಾ ಕೆಲಸ ತ್ಯಜಿಸಬೇಕು ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕರು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ನಾನು ಈ ಲೋಕ ಬಿಟ್ಟು ಹೋಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರೆ.