Bengaluru 28°C
Ad

ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಮಹಿಳೆ-26 iPhone 16 Pro Max ವಶಕ್ಕೆ!

ಇತ್ತೀಚೆಗೆ ಬಿಡುಗಡೆಯಾಗಿದ್ದ ಐಫೋನ್‌ 16 ಪ್ರೊ ಮ್ಯಾಕ್ಸ್‌ ಸರಣಿಯ ಸುಮಾರು 26 ಮೊಬೈಲ್‌ ಗಳನ್ನು ಮಹಿಳಾ ಪ್ರಯಾಣಿಕಳಿಂದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬುಧವಾರ (ಅ.02) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾಗಿದ್ದ ಐಫೋನ್‌ 16 ಪ್ರೊ ಮ್ಯಾಕ್ಸ್‌ ಸರಣಿಯ ಸುಮಾರು 26 ಮೊಬೈಲ್‌ ಗಳನ್ನು ಮಹಿಳಾ ಪ್ರಯಾಣಿಕಳಿಂದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬುಧವಾರ (ಅ.02) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಗೊಂಡಿದ್ದ ಹೈಟೆಕ್‌ ಮೊಬೈಲ್‌ iPhone 16 pro Max ಸರಣಿಯ 26 ಮೊಬೈಲ್‌ ಗಳನ್ನು ಟಿಶ್ಶೂ ಪೇಪರ್‌ ನಲ್ಲಿ ಸುತ್ತಿ ಮಹಿಳೆ ತನ್ನ ವ್ಯಾನಿಟಿ ಬ್ಯಾಗ್‌ ನೊಳಗೆ ಇಟ್ಟುಕೊಂಡಿರುವುದಾಗಿ ವರದಿ ವಿವರಿಸಿದೆ.

Pro Max ಐಫೋನ್‌ 16ರ ಸರಣಿಯ ಟಾಪ್‌ ಮಾಡೆಲ್‌ ಮೊಬೈಲ್‌ ಆಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಹಾಂಗ್‌ ಕಾಂಗ್‌ ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕಳಿಂದ 26 ಐಫೋನ್‌ 16 ಪ್ರೊ ಮ್ಯಾಕ್ಸ್‌ ಅನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

ಈ ಐಫೋನ್‌ ಗಳನ್ನು ಭಾರತಕ್ಕೆ ಕಳ್ಳಸಾಗಣಿಕೆ ಮಾಡುತ್ತಿದ್ದು, ಅಂದಾಜು ಮೌಲ್ಯ 37 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

 

Ad
Ad
Nk Channel Final 21 09 2023