ಸಮಸ್ತಿಪುರ್: ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಆಸ್ಪತ್ರೆಯೊಳಗೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರೊಬ್ಬರ ಖಾಸಗಿ ಅಂಗವನ್ನು ಮಹಿಳಾ ಉದ್ಯೋಗಿಯೊಬ್ಬರು ಬ್ಲೇಡ್ ನಿಂದ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಮುಸ್ರಿಘರಾರಿ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆ ನಂತರ ಗಾಯಗೊಂಡ ಡಾಕ್ಟರ್ ಹಾಗೂ ಅವರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.
ಆರೋಪಿ ಡಾಕ್ಟರ್ ಹಾಗೂ ಆತನ ಇಬ್ಬರು ಸಹಚರರು ಮದ್ಯದ ನಶೆಯಲ್ಲಿದ್ದರು. ಆತ್ಮ ರಕ್ಷಣೆಗಾಗಿ ಬ್ಲೇಡ್ ನಿಂದ ಡಾಕ್ಟರ್ ಖಾಸಗಿ ಅಂಗವನ್ನು ಗಾಯಗೊಳಿಸಿ ನಂತರ ಅಲ್ಲಿಂದ ಓಡಿ ಹೋಗಿದ್ದು, ತದನಂತರ ಆಸ್ಪತ್ರೆಯ ಹೊರಗಿನಿಂದ ಘಟನೆಯ ಬಗ್ಗೆ ತಿಳಿಸಲು ಸಹಾಯವಾಣಿ ಸಂಖ್ಯೆ 112 ಗೆ ಡಯಲ್ ಮಾಡಿರುವುದಾಗಿ ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಮಸ್ತಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಸಂಜಯ್ ಕುಮಾರ್ ಪಾಂಡೆ ಪೊಲೀಸರ ತಂಡವೊಂದು ಕೂಡಲೇ ಸ್ಥಳಕ್ಕೆ ಧಾವಿಸಿ, ಸಂತ್ರಸ್ತೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿತು. ಬಳಿಕ ಪೊಲೀಸ್ ಅಧಿಕಾರಿಗಳ ತಂಡವೊಂದು ಆಸ್ಪತ್ರೆಗೆ ತೆರಳಿ ಡಾಕ್ಟರ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿತು ಎಂದು ಅವರು ಹೇಳಿದರು.ತಿಳಿಸಿದರು.